ಬಾಗಲಕೋಟೆ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವ ತಂದೆಯ ಸಾಹಸ ಮೆಚ್ಚಿ ಮಗಳೊಬ್ಬಳು ಆತನ ಸೇವೆ ಪ್ರಶಂಸಿ 'ನನ್ನ ಅಪ್ಪ ನನ್ನ ಹೀರೋ' ಎಂಬ ಪತ್ರವನ್ನು ಬರೆದಿದ್ದಾಳೆ. ಈ ಪತ್ರ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ವಿದ್ಯಾಗಿರಿಯ ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 10ನೇ ತರಗತಿ ಓದುತ್ತಿರುವ ಮೇಧಾ ಎಂಬ ಬಾಲಕಿ ತನ್ನ ತಂದೆ ಬಾಲಕೃಷ್ಣ ಅವರಿಗೆ ಈ ಮನಮಿಡಿಯುವ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾಳೆ.
ತಂದೆ ಬಾಲಕೃಷ್ಣ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಕೊರೊನಾ ವಾರಿಯರ್ಸ್ ಆಗಿ 15 ದಿಗಳ ಕಾಲ ಕ್ವಾರಂಟೈನ್ ಮುಗಿಸಿದ್ದಾರೆ. ತಂದೆಯ ಈ ಸೇವೆಯಿಂದ ಇಷ್ಟು ದಿನಗಳ ಕಾಲ ದೂರ ಉಳಿದಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೇಧಾ, ಕೊರೊನಾ ವಾರಿಯರ್ಸ್ ಆಗಿ ಮಾಡಿದ ಸೇವೆ ನೆನೆದು ಕಣ್ಣೀರು ಸಹ ಹಾಕಿದ್ದಾಳೆ.