ವಿಜಯಪುರ: ಪಿಎಫ್‌ಐ ಸೇರಿದಂತೆ ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಡಬೇಕು ಎಂದು ನಗರ ಶಾಸಕ ಬಸನಗೌಡ ಯತ್ನಾಳ್ ಒತ್ತಾಯಿಸಿದ್ದಾರೆ.
ಪಿಎಫ್‌ಐ ಕರಾಳ ಮುಖದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ ಕೇಂದ್ರ ಸರ್ಕಾರ ಈಗಾಗಲೇ ವಿದೇಶದಿಂದ ಹಣ ಬರುವ ಎನ್‌ಜಿಒಗಳನ್ನು ರದ್ದು ಮಾಡಿದೆ. ದೇಶ ವಿರೋಧಿ ಚಟುವಟಿಕೆ ನೋಡಿದ್ರೆ ಗೊತ್ತಾಗುತ್ತೆ ಇವರಿಗೆಲ್ಲಾ ವ್ಯವಸ್ಥಿತವಾಗಿ ಹಣ ಬರುತ್ತದೆ. ಇಂತಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಈಗಾಗಲೇ ಕೇಂದ್ರದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಎನ್‌ಐಜಿಯು ದೇಶಾದ್ಯಂತ ಇಂತಹ ಅಕ್ರಮ ಖಾತೆಗಳನ್ನು ನಿಷೇಧ ಮಾಡಿದೆ. ಇನ್ನು ಪಿಎಫ್‌ಐ, ಎಸ್‌ಡಿಪಿ ಸೇರಿದಂತೆ ಇತರ ದೇಶ ವಿರೋಧಿ ಸಂಘಟನೆಗಳನ್ನು ಕೂಡ ನಿಷೇಧಿಸಬೇಕು ಎಂದರು.