ವಿಜಯಪುರ: ರಾಣಿ ಚನ್ನಮ್ಮ ಜಯಂತ್ಯುತ್ಸವದ ನಿಮಿತ್ತ ನಗರದ ಪ್ರಮುಖ ಬೀದಿಗಳಲ್ಲಿ ಬುತ್ತಿ ಮೆರವಣಿಗೆ ಮಾಡಲಾಯಿತು. ಪೇಜಾವರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಸರಳವಾಗಿ ಮೆರವಣಿಗೆ ನಡೆಸಲಾಯಿತು.
ನಗರದ ಸಿದ್ದೇಶ್ವರ ದೇವಸ್ಥಾನ ಪ್ರಾರಂಭವಾದ ಬುತ್ತಿ ಮೆರವಣಿಗೆ ಗಾಂಧಿ ವೃತ್ತದ ಮಾರ್ಗವಾಗಿ ಮುಖ್ಯ ಬೀದಿಗಳಲ್ಲಿ ಶರಣ ಸಂಪ್ರದಾಯ ಪ್ರಕಾರವಾಗಿ ನಗರದ 300 ಅಧಿಕ ಮಹಿಳೆಯರು ತಲೆ ಬುತ್ತಿ ಹೂತ್ತು ಮೆರವಣಿಯಲ್ಲಿ ಸಾಗಿದರು.
ಜಾನಪದ ವಾದ್ಯಗಳ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.