ವಿಜಯಪುರ: ಆಯುರ್ವೇದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದ 105 ವರ್ಷದ ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಹಲವು ಪವಾಡಗಳ ಮೂಲಕ ಪ್ರಸಿದ್ಧಿ ಹೊಂದಿದ್ದ ಸ್ವಾಮೀಜಿ ನಡೆದಾಡುವ ದೇವರು,ಧನ್ವಂತರಿ ಎಂದು ಈ ಭಾಗದಲ್ಲಿ ಕೀರ್ತಿ ಹೊಂದಿದ್ದರು.
1915ರಲ್ಲಿ ಜನಸಿದ್ದ ಮರುಳಾರಾದ್ಯ ಶಿವಾಚಾರ್ಯ ಶ್ರೀಗಳು 1933 ರಲ್ಲಿ ಕನ್ನೋಳಿ ಹಿರೇಮಠದ ಪಟ್ಟಾಧಿಕಾರ ಸ್ವೀಕರಿಸಿದ್ದರು. ಬೆಳಗಿನ ಜಾವ ಲಿಂಗ ಪೂಜೆ ವೇಳೆಯಲ್ಲಿ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಇವರು ಉತ್ತರ ಕರ್ನಾಟಕದಲ್ಲಿ ಅಪಾರ ಭಕ್ತ ಸಮೂಹ ಹೊಂದಿದ್ದರು.