ವಿಜಯಪುರ: ನಗರದ ಹೊರ ವಲಯದ ಭೂತನಾಳ ಕೆರೆ ಪಕ್ಕದಲ್ಲಿ ಕಲ್ಪವೃಕ್ಷ ಅಭಿಯಾನ ಯೋಜನೆಯಡಿ 500 ಏಕರೆ ಪ್ರದೇಶದಲ್ಲಿ ಬೆಳೆಸಲಾಗುತ್ತಿರುವ ಗಿಡಗಳನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖೆಯಿಂದ 500 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಮೂಲಕ ಗಿಡಗಳನ್ನ ಬೆಳೆಸಲಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಬೇಸಿಗೆಯಲ್ಲಿ ಗಿಡಗಳು ಬೆಳೆಸುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿರುತ್ತದೆ. ಪ್ರತಿ ದಿನ ಭೂತನಾಳ ಕೆರೆ ನೀರು ಬಳಸಿ ಹನಿ ನೀರಾವರಿ ಮೂಲಕ 130 ಅಧಿಕ ತಳಿಗಳ ಸಸಿಗಳು ಕಳೆದ 2 ವರ್ಷಗಳ ಹಿಂದೆ ನೆಡಲಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಹಾಗೂ ನಗರದ ಜನತೆಯ ಅನುಕೂಲಕ್ಕಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ಮಾದರಿ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿದ ಬೆನ್ನಲ್ಲೇ ಡಿಸಿ ಪಾಟಿಲ ಗಿಡ ಬೆಳವಣಿಗೆ ಕುರಿತು ಪರಿಶೀಲನೆ ನಡೆಸಿದರು.