ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತ್ ಚುನಾವಣೆ ಪೂರ್ವದಲ್ಲಿ ಮುದ್ದೇಬಿಹಾಳ ಪಿಎಸ್ಐ ರೇಣುಕಾ ಜಕನೂರ ಅವರು ಆರನೇ ವಾರ್ಡಿನ ಅಭ್ಯರ್ಥಿಯ ಪುತ್ರನೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಪ್ರಕರಣದ ತನಿಖೆಯಾಗಬೇಕು ಎಂದು ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಕಗ್ಗೊಲೆಯಂತಹ ಘಟನೆ ಇದಾಗಿದೆ. ಆಡಿಯೋದಲ್ಲಿ ಸಾಹೇಬ್ರು ಎಂಬ ಪದ ಬಳಕೆ ಮಾಡಿದ್ದಾರೆ. ಅವರು ಯಾರು ? ಎಂಬುದು ಬಹಿರಂಗವಾಗಬೇಕು. ಅಧಿಕಾರಿಗಳು ನ್ಯಾಯ ಕೊಡಿಸುವ ಸ್ಥಾನದಲ್ಲಿರುವವರು ಪಕ್ಷಪಾತೀತರಾಗಿ ಯಾಕೆ ಕೆಲಸ ಮಾಡುತ್ತೀರಿ. ಶಿಸ್ತು ಬದ್ಧವಾಗಿ ಹೋದರೆ ಗೌರವ ಸಿಗುತ್ತದೆ. ಇಲ್ಲಿ ಅಧಿಕಾರಿ ರಾಜಕಾರಣಕ್ಕೆ ಪ್ರವೇಶಿಸಿದ್ದು ವೈರಲ್ ಆಗಿರುವ ಆಡಿಯೋದಲ್ಲಿ ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮುದ್ದೇಬಿಹಾಳ ಮಹಿಳಾ ಪಿಎಸ್ಐ ವೈರಲ್ ಆಡಿಯೋ ಬಗ್ಗೆ ತನಿಖೆಗೆ ಆದೇಶ : ಎಸ್ಪಿ
ಗೃಹಮಂತ್ರಿ, ಎಸ್ಪಿ ಅವರು ಸದರಿ ಆಡಿಯೋ ಬಗ್ಗೆ ತನಿಖೆ ನಡೆಸಲಿ. ತಪ್ಪಿದ್ದರೆ ಪಿಎಸ್ವೈ ವಿರುದ್ಧ ಕ್ರಮ ಜರುಗಿಸಲಿ, ಇಲ್ಲದಿದ್ದರೆ ಅವರು ನಿರ್ದೋಷಿ ಎಂದು ಸಾರಬೇಕು ಎಂದು ಆಗ್ರಹಿಸಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ