ETV Bharat / state

ಯತ್ನಾಳ್​​ ಬಳಿ ನನ್ನ ರಹಸ್ಯ ಇದ್ದರೆ ಬಹಿರಂಗಗೊಳಿಸಲಿ: HDK ಸವಾಲು - ಯತ್ನಾಳ್​​ ಬಳಿ ನನ್ನ ರಹಸ್ಯ ಇದ್ದರೆ ಬಹಿರಂಗಗೊಳಿಸಲಿ

ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಹೆಚ್​​ಡಿಕೆ ರಹಸ್ಯಗಳ ಕುರಿತು ಮಾತನಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಕುಮಾರಸ್ವಾಮಿ ರಹಸ್ಯ ಬಯಲು ಮಾಡುವಂತೆ ಸವಾಲು ಎಸೆದಿದ್ದಾರೆ.

JDS Leader HD Kumaraswamy
ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ
author img

By

Published : Oct 21, 2021, 12:25 PM IST

ವಿಜಯಪುರ: ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರ ಎಲ್ಲ ರಹಸ್ಯಗಳು ತಮಗೆ ಗೊತ್ತಿವೆ. ಅದನ್ನು ತೆಗೆಯುವುದಿಲ್ಲ ಎಂದು ಆಲಮೇಲದಲ್ಲಿ ಚುನಾವಣಾ ಪ್ರಚಾರದ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹೆಚ್​ಡಿಕೆ ನನ್ನ ಚರಿತ್ರೆಯಿದ್ದರೆ ತೆರೆದಿಡಿ ಎಂದು ಸವಾಲು ಹಾಕಿದ್ದಾರೆ.

ಯತ್ನಾಳ್​​ ವಿರುದ್ಧ ಹೆಚ್​​.ಡಿ ಕುಮಾರಸ್ವಾಮಿ ವಾಗ್ದಾಳಿ

ನಗರದಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಏನೇನು ಗೊತ್ತಿದೆ? ಎಲ್ಲವನ್ನೂ ಹೊರಗೆ ತಂದು ಬಿಡಿ. ಪಾಪ ನನ್ನ ಜತೆ ಜೆಡಿಎಸ್​​​ನಲ್ಲಿ ಎರಡು ವರ್ಷ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಇರುವ ಚರಿತ್ರೆಯನ್ನು ಜನತೆ ಮುಂದೆ ತರುವಂತೆ ಯತ್ನಾಳ್​​ಗೆ ಟಾಂಗ್ ನೀಡಿದ್ದಾರೆ.

ಕಳೆದ ಸೋಮವಾರ ಆಲಮೇಲದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚನೆಗೆ ಸಿಎಂ ಬೊಮ್ಮಾಯಿ ಪಾಲ್ಗೊಂಡಿದ್ದ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಹೆಚ್​​ಡಿಕೆ ರಹಸ್ಯ ಕುರಿತು ಮಾತನಾಡಿದ್ದರು.

ಬಿಜೆಪಿ ದ್ವಿಮುಖ ನೀತಿ:

ನಿನ್ನೆ (ಬುಧವಾರ) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುವೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಒಂದು ಕಡೆ ಅಲ್ಪಸಂಖ್ಯಾತರನ್ನು ದೇಶದಿಂದ ಹೊರಗಿಡಬೇಕು ಎನ್ನುತ್ತಾರೆ. ಇನ್ನೊಂದೆಡೆ ಅವರಿಗೆ ಸಹಾಯ ಮಾಡಿದ್ದೇವೆ ಎನ್ನುವ ಮೂಲಕ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಭರವಸೆ ನೀಡುತ್ತಿದೆ. ಆದರೆ ಹಿಂದೆ ಕೊಟ್ಟ ಭರವಸೆ ಏನಾಗಿದೆ?. ನಾನು ಸಿಎಂ ಆಗಿದ್ದಾಗ ಸಿಂದಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದೆ. ಹಿಂದೆ ನಮ್ಮಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಹೊರಡಿಸಿರುವ ಭರವಸೆಯಲ್ಲಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗಿದೆ ಎನ್ನುತ್ತಿದ್ದಾರೆ.

ಆದರೆ ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಹಾಗಾದರೆ ಆ ಹಣ ಯಾವ ಅಭಿವೃದ್ಧಿಗೆ ಹೋಯಿತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿಯವರನ್ನು ಹೆಚ್​ಡಿಕೆ ಪ್ರಶ್ನಿಸಿದರು.

ಇದನ್ನೂ ಓದಿ: ನಮ್ಮ ಬಂಡವಾಳ ಏನಿದ್ರು ಬಿಚ್ಚಿಡಲು ಹೇಳಿ, ನನ್ನದು ತೆರೆದ ಪುಸ್ತಕ : ಮಾಜಿ ಸಿಎಂ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.