ವಿಜಯಪುರ : ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ ಎಂ ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಪ್ರಾಧ್ಯಾಪಕ ಮತ್ತು ಯುನೆಸ್ಕೋ ಜೀವ ವಿಜ್ಞಾನ ಪೀಠದ ಮುಖ್ಯಸ್ಥ ಡಾ. ಕುಶಾಲ ದಾಸ್ ಅವರಿಗೆ ಬೊಲಿವಿಯಾ ದೇಶದ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
![International Award for Dr Kushala Das](https://etvbharatimages.akamaized.net/etvbharat/prod-images/kn-vjp-04-national-award-av-ka10055_23122021130456_2312f_1640244896_634.jpg)
ಬೊಲಿವಿಯಾದ ಪ್ಲುರಿ ನ್ಯಾಷನಲ್ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಉದ್ಯಮಕ್ಕೆ ಡಾ.ಕುಶಾಲ ದಾಸ್ ಅವರು 'ದಿ ಎಫೆಕ್ಟ್ ಆಫ್ ಹೈ ಅಲ್ಟಿಟ್ಯೂಡ್ ಆನ್ ದಿ ಇನ್ಸಿಡೆನ್ಸ್ ಆ್ಯಂಡ್ ಸಿವಿಯಾರಿಟಿ ಆಫ್ ಕೊವಿಡ್-19' ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಶಿಕ್ಷಣ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಉಪನಿರ್ದೇಶನಾಲಯದ ಪ್ಲುರಿ ನ್ಯಾಷನಲ್ 8ನೇ ಆವೃತ್ತಿಯ ಪ್ರಥಮ ಪ್ರಶಸ್ತಿಗೆ ಡಾ. ಕುಶಾಲ ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ. ಕುಶಾಲ ದಾಸ್ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿರುವುದಕ್ಕೆ ಬಿಎಲ್‌ಡಿಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ, ಬಿಎಲ್‌ಡಿಇ ಡೀಮ್ಡ್ ವಿವಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.