ETV Bharat / state

ವಿಜಯಪುರದಲ್ಲಿ ವಿಮೆ ಪರಿಹಾರ ಗೊಂದಲ: ರೈತರ ಸಿಡಿಮಿಡಿ

ಕೇಂದ್ರ ಸರ್ಕಾರ ರೈತರಿಗೆ ಸಂಕಷ್ಟದ ಕಾಲದಲ್ಲಿ ನೆರವಾಗಲೆಂದು ಫಸಲ್ ಭೀಮಾ ಯೋಜನೆ ಜಾರಿ ಮಾಡಿದೆ. ಸಂಕಷ್ಟದ ಕಾಲಕ್ಕೆ ರೈತರಿಗೆ ನೆರವಾಗದೆ ಯೋಜನೆ ಹಳ್ಳ ಹಿಡಿದಂತಾಗಿದೆ ಎಂದು ರೈತರು ಸರ್ಕಾರ ವಿರುದ್ಧ ಕಿಡಿಕಾರುತ್ತಿದ್ದಾರೆ..

author img

By

Published : Oct 27, 2020, 11:43 PM IST

Insurance solution confusion in Vijayapura
ವಿಜಯಪುರದಲ್ಲಿ ವಿಮೆ ಪರಿಹಾರ ಗೊಂದಲ: ರೈತರ ಸಿಡಿಮಿಡಿ

ವಿಜಯಪುರ: ರೈತ ಬೆಳೆದ‌ ಬೆಳೆಗಳು ಹಾನಿಯಾದ್ರೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಲಸ ಭೀಮಾ‌ ಯೋಜನೆ ಮೂಲಕ ರೈತರ ಬೆಳೆಗಳ‌ ವಿಮೆ ವ್ಯಾಪ್ತಿಗೆ ಬಳಪಡಿಸಿ ವಿಮೆ‌ ಕಂಪನಿಗಳ ಮೂಲಕ ಪರಿಹಾರ ಕಲ್ಪಿಸುತ್ತೆ. ಆದ್ರೆ, ಈ ಯೋಜನೆ ಸದ್ಯ ರೈತರಿಗೆ ಅನ್ಯಾಯ ಮಾಡಿ ಕಂಪನಿಗಳು ಅಂದ್ರೆ ಒಂದ್ರೀತಿ ಮಟ್ಕಾ ದಂಧೆಯಂತೆ ಮಾಡ್ತಿವೆ ಅಂತಾ‌ ರೈತರು ಆರೋಪ ಮಾಡ್ತಿದ್ದಾರೆ.

ವಿಜಯಪುರದಲ್ಲಿ ವಿಮೆ ಪರಿಹಾರ ಗೊಂದಲ : ರೈತರ ಸಿಡಿಮಿಡಿ

ರೈತರಿಗೆ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ‌ ಅನಾವೃಷ್ಟಿಯಿಂದ ಬೆಳೆಗಳು ಹಾನಿಗೀಡಾಗುತ್ತಿವೆ. ಬೆಳೆದ ಬೆಳೆಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇತ್ತ ಕೇಂದ್ರ ಸರ್ಕಾರ ರೈತರಿಗೆ ಸಂಕಷ್ಟದ ಕಾಲದಲ್ಲಿ ನೆರವಾಗಲೆಂದು ಫಸಲ್ ಭೀಮಾ ಯೋಜನೆ ಜಾರಿ ಮಾಡಿದೆ. ಸಂಕಷ್ಟದ ಕಾಲಕ್ಕೆ ರೈತರಿಗೆ ನೆರವಾಗದೆ ಯೋಜನೆ ಹಳ್ಳ ಹಿಡಿದಂತಾಗಿದೆ ಎಂದು ರೈತರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ವಿಮೆ ಕಂಪನಿಗಳು ರೈತರ ಜೊತೆಗೆ ಪರಿಹಾರದ ವಿಷಯವಾಗಿ ಚೆಲ್ಲಾಟವಾಡುತ್ತಿದೆ ಎಂಬುದು ರೈತರ ವಾದವಾಗಿದೆ. ಕೃಷಿಕರಿಗೆ ಸೇರಬೇಕಾದ ವಿಮೆ ಪರಿಹಾರ ಧನ ವಿತರಣೆಯಲ್ಲಿ ರೈತರಿಗೆ ತಾರತಮ್ಯ ಮಾಡುತ್ತಿದ್ದು, ರೈತರ ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಾದ ವಿಮೆ ಪರಿಹಾರ ಉಂಡವರಿಗೆ ಎಡೆ ಎಂಬಂತೆದಾಗಿದೆ ಎಂದು ರೈತರು ಆರೋಪವಾಗಿದೆ.

ಇತ್ತ ವಿಜಯಪುರ ಜಿಲ್ಲೆಯಲ್ಲಿ ತೊಗರಿ, ಹತ್ತಿ, ಶೇಂಗಾ, ಜೋಳ ಸೇರಿದಂತೆ ಹಲವು ಬೆಳೆಗಳ ಪರಿಹಾರಕ್ಕಾಗಿ ತಲಾ ಒಂದು ಬೆಳೆಗೆ 1000 ರಿಂದ 2500 ರೂ. ರೈತರು ವಿಮೆಗೆ ಪಾವತಿಸಿದ್ರು ಸರಿಯಾಗಿ ಪರಿಹಾರ ವಿತರಣೆ ಮಾಡ್ತಿಲ್ಲ. ಹೀಗಾಗಿ, ವಿಮೆ ಕಂಪನಿಗಳು ಸರ್ಕಾರ ಒಡೆತನಕ್ಕೆ ಸೇರಿಸಬೇಕು ಎಂದು ಗುಮ್ಮಟನಗರಿ ನಗರಿ ಜಿಲ್ಲೆಯ ರೈತರು ಆಗ್ರಹಿಸುತ್ತಿದ್ದಾರೆ.

ಇನ್ನು 2017-18 ಸಾಲಿನಲ್ಲಿ ಮುಂಗಾರಿನ ಅವಧಿಯಲ್ಲಿ 16004 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದರು. ಈ ಪೈಕಿ 39905 ರೈತರಿಗೆ 76.27 ಕೋಟಿ ಪರಿಹಾರ ನೀಡಿದ್ರೆ, 1231 ಜನರಿಗೆ ಪರಿಹಾರ ಹಣ ಬರಲಿಲ್ಲ. ಹಿಂಗಾರು ಅವಧಿಯಲ್ಲಿ 729 ರೈತರು ನೋಂದಣಿ ಮಾಡಿದಾಗ, 29 ಲಕ್ಷ ಹಣದಲ್ಲಿ 438 ರೈತರಿಗೆ ಮಾತ್ರ ಪರಿಹಾರಧನ ತಲುಪಿದೆ.

2018-19 ನೇ ಸಾಲಿನ ಮುಂಗಾರಿನಲ್ಲಿ 79803 ರೈತರು ನೋಂದಣಿ ಮಾಡಿದ್ದಾರೆ. 63607 ರೈತರಿಗೆ ಹಣ ಜಮಾವಾಗಿದೆ. ಹಿಂಗಾರಿನಲ್ಲಿ 52,946 ರೈತರು ವಿಮೆ‌ ನೋಂದಣಿ ಮಾಡಿದ್ರೆ, 253 ಕೋಟಿ ಪರಿಹಾರ ವಿಮೆ ಕಂಪನಿಗಳು ಹಣ ಜಮಾ ಮಾಡಿದೆ. ಈ ಪೈಕಿ 4000 ರೈತರಿಗೆ ಪರಿಹಾರ ನೀಡಲ್ಲ. ಹಿಂಗಾರಿನಲ್ಲಿ 52946 ರೈತರು ವಿಮೆಗೆ ಹೆಸರು ನೋಂದಾಯಿಸಿದ್ದಾರೆ‌. 13 ಕೋಟಿ ಪಾವತಿಯಾಗಿದೆ.

ಅದೇ ತರನಾಗಿ 2019-20 ರಲ್ಲಿ ಜಿಲ್ಲೆಯಲ್ಲಿ 4.45 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಈ ಪೈಕಿ ಮುಂಗಾರಿನಲ್ಲಿ 18340 ರೈತರು ಹಾಗೂ ಹಿಂಗಾರಿನಲ್ಲಿ 81298 ರೈತರು ಪಾವತಿ ಮಾಡಿದ್ದಾರೆ. ಇದುವರಿಗೂ ಪರಿಹಾರ ಬಂದಿಲವ್ಲಂತೆ. 2020-21 ಈ ಅವಧಿಯಲ್ಲಿ ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು, 88496 ರೈತರು ಬೆಳೆ ವಿಮೆ ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳನ್ನ ಕೇಳಿದ್ರೆ ರೈತರು ವಿಮೆ ನೋಂದಣಿ ಮಾಡುವಾಗ ರೈತರ ದಾಖಲಾತಿಗಳ ತಾಂತ್ರಿಕ ದೋಷವಿದೆ.

ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಲ್ಲಿ ಇದುವರಿಗೂ 5400 ರೈತರಿಗೆ ಪರಿಹಾರ ಹಂಚಿಕೆಯಾಗಿಲ್ಲ. 2500 ಜನ ರೈತರಿಗೆ ಪರಿಹಾರ ಒದಗಿಸುವ ಕ್ರಮ ಮುಂದಾಗಿದ್ದೇವೆ. ಬಾಕಿ ರೈತರಿಗೆ ಯಾವುದೇ ಅಡತಡೆವಿಲ್ಲದೆ ಬೆಳೆ ಪರಿಹಾರ ವಿಮೆ ಹಣ ಜಮಾ ಮಾಡಲು ಕ್ರಮಕ್ಕೆ ಮುಂದಾಗುವುದಾಗಿ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಕಷ್ಟ ಕಾಲದಲ್ಲಿ ರೈತರಿಗೆ ಸಹಾಯವಾಗುವ ಫಸಲ್ ಭೀಮಾ ಯೋಜನೆ‌ ರೈತರಿಗೆ ಸರಿಯಾಗಿ ಹಂಚಿಕೆಯಾಗ್ತಿಲ್ಲ ಅಂತಾ ರೈತರ ಆರೋಪ ಮಾಡ್ತಿದ್ದಾರೆ.‌ ಇನ್ನಾದ್ರೂ ಅಧಿಕಾರಿಗಳು ರೈತರ ಗೊಂದಲಗಳಿಗೆ ತೆರೆ ಎಳೆಯುವ ಕಾರ್ಯಕ್ಕೆ ಮುಂದಾಗುತ್ತಾರ ಎಂಬುದನ್ನ ಕಾದುನೋಡ್ಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.