ವಿಜಯಪುರ: ದುಬೈ ಪ್ರವಾಸ ಮುಗಿಸಿಕೊಂಡು ವಿಜಯಪುರಕ್ಕೆ ಬಸ್ಸಿನಲ್ಲಿ ಬಂದವರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಒಟ್ಟು 150 ಮಂದಿ ನಾನಾ ದೇಶಗಳಿಂದ ವಿಜಯಪುರಕ್ಕೆ ವಾಪಸಾಗಿದ್ದಾರೆ. ಇಂದು ದುಬೈ ಪ್ರವಾಸದಿಂದ ತಂಡವೊಂದು ಬಸ್ನಲ್ಲಿ ವಿಜಯಪುರಕ್ಕೆ ಆಗಮಿಸಿದೆ. ಅವರನ್ನು ಶಿವಣಗಿ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗಿದೆ. ಈ ತಂಡದ ಸದಸ್ಯರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಇನ್ನು ನಿನ್ನೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.