ETV Bharat / state

₹5.40 ಕೋಟಿ ಬಹುಗ್ರಾಮ ಕುಡಿವ ನೀರಿನ ಯೋಜನೆ ವಿಫಲ.. ತಹಶೀಲ್ದಾರ್‌ಗೆ ಮನವಿ - villagers appeal

ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ತಾಲೂಕಿನ ವ್ಯಾಪ್ತಿಯ ಮೂಕಿಹಾಳ ಗ್ರಾಪಂನ 7 ಹಳ್ಳಿಗಳಿಗೆ ನೀರು ಒದಗಿಸುವ ಬಹು ಗ್ರಾಮ ಕುಡಿವ ನೀರಿನ ಯೋಜನೆ ಅಡಿ ಸಮರ್ಪಕ ನೀರು ಬರುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯುಂಟಾಗಿದೆ..

villagers appeal to tehsildar
ಸಮರ್ಪಕ ನೀರು ಪೂರೈಕೆಗೆ ಒತ್ತಾಯ: ಗ್ರಾಮಸ್ಥರಿಂದ ತಹಶೀಲ್ದಾರರಿ‌ಗೆ ಮನವಿ
author img

By

Published : Jun 24, 2020, 9:54 PM IST

ಮುದ್ದೇಬಿಹಾಳ : ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ 5.40 ಕೋಟಿ ರೂ. ಬಹು ಗ್ರಾಮ ಕುಡಿವಯು ನೀರಿನ ಯೋಜನೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ತಾಳಿಕೋಟಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಸಮರ್ಪಕ ನೀರು ಪೂರೈಕೆಗೆ ಒತ್ತಾಯ.. ಗ್ರಾಮಸ್ಥರಿಂದ ತಹಶೀಲ್ದಾರರಿ‌ಗೆ ಮನವಿ

ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ತಾಲೂಕಿನ ವ್ಯಾಪ್ತಿಯ ಮೂಕಿಹಾಳ ಗ್ರಾಪಂನ 7 ಹಳ್ಳಿಗಳಿಗೆ ನೀರು ಒದಗಿಸುವ ಬಹು ಗ್ರಾಮ ಕುಡಿವ ನೀರಿನ ಯೋಜನೆ ಅಡಿ ಸಮರ್ಪಕ ನೀರು ಬರುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯುಂಟಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ, ಗ್ರಾಮಸ್ಥರು ತಾಳಿಕೋಟಿ ತಹಶೀಲ್ದಾರ್ ಅನಿಲ್‌ಕುಮಾರ್‌ ಢವಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

villagers appeal to tehsildar
ಮನವಿ ಪತ್ರ

ಈ ವೇಳೆ ಮಾತನಾಡಿದ ಗ್ರಾಮಸ್ಥ ಶಿವರಾಜ ನಾಗೂರ್‌, 5.40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹುಹಳ್ಳಿ ಕುಡಿವ ನೀರಿನ ಯೋಜನೆ 2013-14ನೇ ಸಾಲಿನಲ್ಲಿ ಮಂಜೂರಾಗಿದೆ. ಆದರೆ, ಈವರೆಗೆ ಯಾವ ಹಳ್ಳಿಗೂ ಸರಿಯಾಗಿ ನೀರು ಸರಬರಾಜಾಗಿಲ್ಲ. ಈ ಯೋಜನೆಯ ಉದ್ದೇಶವೇ ತಲೆಕೆಳಗಾಗಿದೆ. ಇನ್ನು 8 ದಿನಗಳಲ್ಲಿ ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.