ETV Bharat / state

ಮಹಾದಿಂದ ವಿಜಯಪುರಕ್ಕೆ ಅಕ್ರಮ ವಲಸೆ: ಕಾರ್ಮಿಕರ ಎಂಟ್ರಿಗೆ ಭೀಮೆಯೇ ಆಸರೆ - ವಿಜಯಪುರ‌ ಮಹಾರಾಷ್ಟ್ರದಿಂದ ಅಕ್ರಮವಾಗಿ ವಲಸೆ ಕಾರ್ಮಿಕರು ಎಂಟ್ರಿ ಸುದ್ದಿ

ವಲಸೆ ಕಾರ್ಮಿಕರು ಅಕ್ರಮವಾಗಿ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಪಾಸಿಟಿವ್ ಸಂಖ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದ್ದಾರೆ. ಇದು ಸಹಜವಾಗಿ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಅಕ್ರಮವಾಗಿ ಕರ್ನಾಟಕಕ್ಕೆ ಬರಲು ಬತ್ತಿದ ಭೀಮಾನದಿಯೇ ಆಶ್ರಯವಾಗಿದೆ.

ಮಹಾರಾಷ್ಟ್ರದಿಂದ ಅಕ್ರಮವಾಗಿ ವಿಜಯಪುರಕ್ಕೆ ವಲಸೆ ಕಾರ್ಮಿಕರು ಎಂಟ್ರಿ
ಮಹಾರಾಷ್ಟ್ರದಿಂದ ಅಕ್ರಮವಾಗಿ ವಿಜಯಪುರಕ್ಕೆ ವಲಸೆ ಕಾರ್ಮಿಕರು ಎಂಟ್ರಿಮಹಾರಾಷ್ಟ್ರದಿಂದ ಅಕ್ರಮವಾಗಿ ವಿಜಯಪುರಕ್ಕೆ ವಲಸೆ ಕಾರ್ಮಿಕರು ಎಂಟ್ರಿ
author img

By

Published : Jun 9, 2020, 9:54 AM IST

ವಿಜಯಪುರ‌: ಮಹಾರಾಷ್ಟ್ರದ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಕಂಟಕವಾಗಿದ್ದಾರೆ. ಇವರನ್ನು ತವರಿಗೆ ಕರೆ ತರಲು ಮುಂಬೈ-ಗದಗ ರೈಲು ಸಂಚಾರ ಆರಂಭಿಸಿದೆ. ಆದರೆ, ವಿಜಯಪುರಕ್ಕೆ ಬಂದ ಮೇಲೆ ಕ್ವಾರಂಟೈನ್ ಕೇಂದ್ರಕ್ಕೆ ಹಾಕುತ್ತಾರೆ ಎನ್ನುವ ಭಯಕ್ಕೆ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಿಂದ ಅಕ್ರಮವಾಗಿ ವಿಜಯಪುರ ಜಿಲ್ಲೆಗೆ ವಲಸೆ ಕಾರ್ಮಿಕರು ಎಂಟ್ರಿ ಕೊಡುತ್ತಿದ್ದಾರೆ.

ಮಹಾರಾಷ್ಟ್ರದಿಂದ ಅಕ್ರಮವಾಗಿ ವಿಜಯಪುರಕ್ಕೆ ವಲಸೆ ಕಾರ್ಮಿಕರು ಎಂಟ್ರಿ

ವಲಸೆ ಕಾರ್ಮಿಕರು ಅಕ್ರಮವಾಗಿ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಪಾಸಿಟಿವ್ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದಾರೆ. ಇದು ಸಹಜವಾಗಿ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಅಕ್ರಮವಾಗಿ ಕರ್ನಾಟಕಕ್ಕೆ ಬರಲು ಬತ್ತಿದ ಭೀಮಾನದಿ ಆಶ್ರಯವಾಗಿದೆ. ಬತ್ತಿಹೋದ ಭೀಮಾ ನದಿಯನ್ನ ಅಡ್ಡಲಾಗಿ ದಾಟಿಕೊಂಡು ವಲಸಿಗರು ಬರುತ್ತಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲಿರುವ ವಿಜಯಪುರಕ್ಕೆ ಆತಂಕ ಹೆಚ್ಚಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಎಂಟ್ರಿ ಕೊಡುತ್ತಿದ್ದಾರೆ. ಜಿಲ್ಲೆಯ ಚಡಚಣ ತಾಲೂಕಿಗೆ ಎಂಟ್ರಿ ಕೊಟ್ಟು ನಂತರ ಬಸ್​​​​ಗಳ ಮೂಲಕ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಮಹಾರಾಷ್ಟ್ರದ ತೇಲಗಾಂವ ನಿಂದ ಚಡಚಣದ ಉಮರಜ್ ಮೂಲಕ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದಕ್ಕೆ ಕೆಲ ಸ್ಥಳೀಯರು ಸಾಥ ನೀಡುತ್ತಿದ್ದಾರೆ. ಬತ್ತಿದ ಭೀಮಾನದಿಯಲ್ಲಿ ಬೈಕ್ ಮೂಲಕ ಮಹಾರಾಷ್ಟ್ರ ಗಡಿಗೆ ಹೋಗಿ ಅಲ್ಲಿನ ವಲಸಿಗರನ್ನು ಬೈಕ್ ನಲ್ಲಿ ಕರೆದುಕೊಂಡು ಬರುತ್ತಿದ್ದಾರೆ.

ಕರ್ನಾಟಕ- ಮಹಾರಾಷ್ಟ್ರದ ಗಡಿಯಲ್ಲಿರುವ ಭೀಮಾನದಿಯೇ ಇವರಿಗೆ ಸೇತುವೆಯಾಗಿದೆ. ಚೆಕ್ ಪೋಸ್ಟ್ ಕಣ್ಣು ತಪ್ಪಿಸಿ ಒಳ ಬರುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.