ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಪಂಗೆ ಸಂಬಂಧಿಸಿದಂತೆ ಎರಡು ವಾರ್ಡ್ಗಳಲ್ಲಿ ಮೀಸಲಾತಿ ಪುನರಾವರ್ತನೆಯಾಗಿರುವುದು ಹಾಗೂ ವಾರ್ಡ್ಗಳಲ್ಲಿ ವ್ಯತ್ಯಾಸವಾಗಿರುವ ಕುರಿತಂತೆ ಪರಿಶೀಲನೆ ನಡೆಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಹೇಳಿದ್ದಾರೆ.
ಬಿದರಕುಂದಿ ಗ್ರಾಮ ಪಂಚಾಯಿತಿಯಲ್ಲಿ 2015ರಲ್ಲಿ ಹಾಗೂ ಈ ಸಲದ ಚುನಾವಣೆಯ ವೇಳೆ ಪಂಚಾಯಿತಿಯ ವಾರ್ಡ್ ಸಂಖ್ಯೆ ಒಂದು ಮತ್ತು ಮೂರನೇ ವಾರ್ಡ್ನಲ್ಲಿ ಮೀಸಲಾತಿ ಪುನರಾವರ್ತನೆಯಾಗಿದೆ ಎಂದು ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಇನ್ನೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ. ಆಯೋಗದಿಂದ ಬರುವ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಅರ್ಜಿದಾರ ವಕೀಲ ಜಿ.ಎಸ್.ಬಿಜ್ಜೂರ ಮಾತನಾಡಿ, ಬಿದರಕುಂದಿಯ ಮತಕ್ಷೇತ್ರಗಳು ಅದಲು ಬದಲಾಗಿದ್ದು ಮತದಾರರು ಮಾತ್ರ ಅದೇ ವಾರ್ಡ್ನವರಾಗಿದ್ದಾರೆ. ಅಲ್ಲದೇ 2015ರ ಮೀಸಲಾತಿಯನ್ನು 2020ಕ್ಕೂ ಮುಂದುವರೆಸಿದ್ದಾರೆ. ಕೆಲವು ರಾಜಕಾರಣಿಗಳ ಮಾತು ಕೇಳಿಕೊಂಡು ಚುನಾವಣೆಯನ್ನು ಅಕ್ರಮವಾಗಿ ನಡೆಸಿದ್ದು, ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.