ETV Bharat / state

ಕೊಟ್ಟ ಭರವಸೆ ಈಡೇರಿಸದಿದ್ದರೆ 2028ರ ವಿಧಾನಸಭೆ ಚುನಾವಣೆಗೂ ಮುನ್ನವೇ ಜೆಡಿಎಸ್ ವಿಸರ್ಜನೆ: ಹೆಚ್​​​ಡಿಕೆ - ಪಂಚರತ್ನ ಯೋಜನೆಗಳಿಂದ ರಾಮರಾಜ್ಯ

6 ದಿನ ವಿಜಯಪುರದಲ್ಲಿ ಸಂಚರಿಸಲಿರುವ ಜೆಡಿಎಸ್ ಪಂಚರತ್ನ ಯಾತ್ರೆ - ಸಿಂದಗಿ ತಾಲೂಕಿನ ಕನ್ನೋಳ್ಳಿ ಗ್ರಾಮಕ್ಕೆ ಪಂಚರತ್ನ ಯಾತ್ರೆ ಆಗಮನ

JDS Pancharatna Yatra was held in Kannolli village of Sindagi taluk
ಸಿಂದಗಿ ತಾಲೂಕಿನ ಕನ್ನೋಳ್ಳಿ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಿತು
author img

By

Published : Jan 18, 2023, 7:41 PM IST

ಜೆಡಿಎಸ್ ಪಂಚರತ್ನ ಯಾತ್ರೆ

ವಿಜಯಪುರ:ಈ ಬಾರಿ ಜೆಡಿಎಸ್​​ಗೆ ಪೂರ್ಣ ಬಹುಮತ ನೀಡಿ, ನಾನು ಕೊಟ್ಟ ಭರವಸೆ ಈಡೇರಿಸದ್ದಿದ್ದರೆ 2028ರ ವಿಧಾನಸಭೆ ಚುನಾವಣೆಗೆ ಮುನ್ನವೇ ಪಕ್ಷ ವಿಸರ್ಜನೆ ಮಾಡುತ್ತೇನೆ. ನಿಮ್ಮ ಹತ್ತಿರ ಮತ‌ ಕೇಳಲು ಜೆಡಿಎಸ್ ಬರುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಸಿಂದಗಿ ಪಟ್ಟಣದ ಅಂಜುಮನ್ ಕಾಲೇಜಿನ ಮೈದಾನದಲ್ಲಿ ನಡೆದ ಪಂಚರತ್ನ ರಥ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಸಾಲಗಾರರು ಆಗದಂತೆ ನೋಡಿಕೊಳ್ಳದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಸಿಂದಗಿಯ ಜನರು ಮಾಜಿ ಪ್ರಧಾನಿ ದೇವೇಗೌಡರು ಅವರು ನೀಡಿದ್ದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ, ದೇವೇಗೌಡರ ಮೇಲೆ ನೀವಿಟ್ಟ ಪ್ರೀತಿ ಮರೆತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಪಂಚರತ್ನ ಯೋಜನೆಗಳಿಂದ ರಾಮರಾಜ್ಯ:ಪಂಚರತ್ನ ಯೋಜನೆಗಳ ಬಗ್ಗೆ ಮಾತನಾಡಲು ಮೂರ್ನಾಲ್ಕು ಗಂಟೆ ಬೇಕು. ಪಂಚರತ್ನ ಯೋಜನೆಗೆ ಜಾತಿ - ಧರ್ಮ ಇಲ್ಲ. ಈ 5 ಕಾರ್ಯಕ್ರಮ ಜಾರಿಯಾದರೆ ರಾಜ್ಯ ರಾಮರಾಜ್ಯ ಆಗುತ್ತದೆ. ಕಾಂಗ್ರೆಸ್, ಬಿಜೆಪಿ ಜತೆಗೆ ಸೇರಿಕೊಂಡು, ಈ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡೋದು ಸಾಧ್ಯವಿಲ್ಲ. ಈ ಬಾರಿ ಕಾಂಗ್ರೆಸ್-ಬಿಜೆಪಿ ಜತೆಗೆ ಸಾತ್ ಇಲ್ಲ ಎಂದು ತಿಳಿಸಿದರು.

ಯತ್ನಾಳ್ - ನಿರಾಣಿ ಕಿತ್ತಾಟ ಪ್ರಸ್ತಾಪ: ಒಂದೇ ಪಕ್ಷದಲ್ಲಿದ್ದರೂ ಬಿಜೆಪಿ ಶಾಸಕರು ಮಂತ್ರಿಗಳೂ ಕೆಸರಾಚಾಟ ನಡೆಸಿದ್ದಾರೆ. ಅವರ ಬಳಕೆ ಮಾಡುವ ಭಾಷೆ ನೋಡಿದ್ದೀರಾ?. ವಿಜಯಪುರದ ನಾಯಕ, ಬಾಗಲಕೋಟ ಸಚಿವ ಎಂದು ಹೆಸರು ಹೇಳದೇ ನಿರಾಣಿ - ಯತ್ನಾಳ್ ಕಿತ್ತಾಟವನ್ನು ಪ್ರಸ್ತಾಪಿಸಿದರು.‌ ಬಿಜೆಪಿ ಶಾಸಕ-ಸಚಿವರ ವಾಕ್ಸಮರವನ್ನೇ ಟಾರ್ಗೆಟ್ ಮಾಡಿಕೊಂಡು ಹೆಚ್​​ ಡಿ ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡ್ತಿದ್ದಾರೆ. ಕಾಂಗ್ರೆಸ್ - ಬಿಜೆಪಿ ರೈತರಿಗಾಗಿ ಕಾರ್ಯಕ್ರಮ ಕೊಡಲಿಲ್ಲ ಎಂದು ಅಪಾದಿಸಿದರು.

ಪಂಚರತ್ನ ಯಾತ್ರೆಗೆ ಅದ್ದೂರಿ ಸ್ವಾಗತ: 6 ದಿನಗಳ ಕಾಲ ವಿಜಯಪುರದಲ್ಲಿ ಸಂಚರಿಸಲಿರುವ ಪಂಚರತ್ನ ಯಾತ್ರೆ ಇಂಡಿ ತಾಲೂಕು ಮುಗಿಸಿಕೊಂಡು ಇಂದು ಸಿಂದಗಿ ತಾಲೂಕಿನ ಕನ್ನೋಳ್ಳಿ ಗ್ರಾಮಕ್ಕೆ ಆಗಮಿಸಿತು.‌‌ ಮಹಿಳೆಯರು ಆರತಿ ಬೆಳಗಿಸುವುದರೊಂದಿಗೆ ಮಾಜಿ ಸಿಎಂ ಕುಮಾರ ಸ್ವಾಮಿಗೆ ಭವ್ಯ ಸ್ವಾಗತ ಕೋರಿದರು. ನಂತರ ಸಿಂದಗಿ ಪಟ್ಟಣಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿತು.‌

ತೆರೆದ ವಾಹನದಲ್ಲಿ ಪಂಚರಥ ಯಾತ್ರೆ:ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್ ಸರ್ಕಲ್‌ನಲ್ಲಿ ಯಾತ್ರೆ ಮೆರವಣಿಗೆ ನಡೆಯಿತು.‌ ತೆರೆದ ವಾಹನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಅಂಜುಮನ್ ಕಾಲೇಜಿನ ಮೈದಾನಕ್ಕೆ ಆಗಮಿಸಿತು.‌ ಸಿಂದಗಿ ಅಭ್ಯರ್ಥಿ ಶಿವಾನಂದ ಸೋಮಜಾಳ ಜತೆ ಇದ್ದರು.‌

ಜೆಡಿಎಸ್ ಅಭ್ಯರ್ಥಿ ಘೋಷಣೆ: ಸಿಂದಗಿ ತಾಲೂಕು ಕನ್ನೊಳ್ಳಿ ಕ್ರಾಸ್ ಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಮಾಧ್ಯಮದ ಜತೆ ಮಾತನಾಡಿ, ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನತೆಯಿಂದಲೂ ಸ್ಪಂದನೆ ಸಿಗುತ್ತಿದೆ. ಸಿಂದಗಿ ಕ್ಷೇತ್ರದಲ್ಲಿ ಮೊದಲು ಜೆಡಿಎಸ್ ಉತ್ತಮ ಸಂಘಟನೆ ಇತ್ತು. ಎಂ ಸಿ ಮನಗೂಳಿ ನಿಧನದ ನಂತರ ಅವರ ಕುಟುಂಬದವರು ಕಾಂಗ್ರೆಸ್​​​ಗೆ ಪಕ್ಷಾಂತರಗೊಂಡರು. ಈ ಬಾರಿ ಸಿಂದಗಿಯಲ್ಲಿ ಜೆಡಿಎಸ್​​​ಗೆ ಜನರು ಬೆಂಬಲಿಸುವ ವಿಶ್ವಾಸ ಇದೆ. ಸಿಂದಗಿ ಕ್ಷೇತ್ರಕ್ಕೆ ಶಿವಾನಂದ ಪಾಟೀಲ ಸೋಮಜಾಳ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ ಎಂದರು.

ಮೋದಿ ಆಗಮನಕ್ಕೆ ವ್ಯಂಗ್ಯ: ಪ್ರಧಾನಿ ಮೋದಿಯವರು ಅವರು, ಕಲಬುರ್ಗಿ ಜಿಲ್ಲೆಯ ಮಳಖೇಡ ಗ್ರಾಮಕ್ಕೆ ಆಗಮಿಸಲಿದ್ದು, ರೈತರ ಸಮಸ್ಯೆಗೆ ಏನು ಹೇಳುತ್ತಾರೋ ನೋಡೋಣ. ಒಂದೇ ತಿಂಗಳಲ್ಲಿ 25 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏನೋ ಕಂದಾಯ ಗ್ರಾಮ ಮಾಡಿ ಹಕ್ಕು ಪತ್ರ ವಿತರಿಸೋಕೆ , ಹಕ್ಕು ಪತ್ರ ಕೊಡೋದರಲ್ಲಿ ಏನಿದೆ..?ಇದೊಂದು ನಾಟಕ ಎಂದು ಲೇವಡಿ‌ ಮಾಡಿದರು.‌

ಇದನ್ನೂಓದಿ:ಇನ್ನೂ ಮೂರು ಗ್ಯಾರಂಟಿ ಬರೋದು ಬಾಕಿ ಇದೆ.. ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ : ಯು‌ ಟಿ ಖಾದರ್ ವಿಶ್ವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.