ವಿಜಯಪುರ : ನಿಂಬೆ ಕಣಜ ಎಂದೇ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಹಣ್ಣಿನ ಹೊಸ ತಳಿಗಳಿಗಳಿಗೆ ಸದ್ಯದಲ್ಲಿಯೇ ಭೌಗೋಳಿಕ ಸೂಚ್ಯಂಕ (ಜಿಐ) ಟ್ಯಾಗ್ ಲಭಿಸಲಿದೆ. ಇದು ಜಿಲ್ಲೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಲಿದೆ.
ಜಿಲ್ಲೆ ಈಗಾಗಲೇ ದ್ರಾಕ್ಷಿ ಬೆಳೆಗಳಿಗೆ ಖ್ಯಾತಿ ಹೊಂದಿದೆ. ಇಲ್ಲಿನ ದ್ರಾಕ್ಷಿ ವಿದೇಶಕ್ಕೂ ರಫ್ತಾಗುವ ಮೂಲಕ ಜಿಲ್ಲೆಯನ್ನು ದ್ರಾಕ್ಷಿಯ ತವರೂರು ಎಂದು ಕರೆಯುತ್ತಾರೆ. ಇದು ಬಿಟ್ಟರೆ ಅತಿ ಹೆಚ್ಚು ಬೆಳೆಯುವ ನಿಂಬೆ ಹಣ್ಣಿಗೂ ದೇಶ-ವಿದೇಶದಲ್ಲಿಯೂ ಹೆಚ್ಚಿನ ಡಿಮ್ಯಾಂಡ್ ಇದೆ.
ಜಿಲ್ಲೆಯ ಗಡಿಭಾಗಕ್ಕೆ ಹೊಂದಿರುವ ಇಂಡಿ ತಾಲೂಕಿನಲ್ಲಿ ಅತಿ ಹೆಚ್ಚು ನಿಂಬೆ ಹಣ್ಣು ಬೆಳೆಯಲಾಗುತ್ತದೆ. ಇಲ್ಲಿಯ ನಿಂಬೆ ಹಣ್ಣು ಹೆಚ್ಚು ಆಮ್ಲೀಯ ಮೌಲ್ಯ (ಹೆಚ್ಚು ರಸ) ಹೊಂದಿರುತ್ತದೆ.
ಈ ಬಗ್ಗೆ ಬಹಳ ವರ್ಷಗಳ ಹಿಂದೆಯೇ ಲಿಂಬೆ ಹೊಸ ತಳಿಯ ಬಗ್ಗೆ ಹೆಚ್ಚಿನ ವಿವರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಲಿಂಬೆ ಹಣ್ಣಿಗೆ ಸಿಗಬೇಕಾಗಿದ್ದ ಗೌರವ ದೊರೆತಿರಲಿಲ್ಲ.
ನಂತರ ಪಕ್ಕದ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈಗ ಹಣ್ಣಿನ ವಿಶೇಷ ಗುಣಗಳಿಗೆ ಸಂಬಂಧ ಪಟ್ಟ ಒಳನೋಟ ಹಾಗೂ ಪೂರಕ ದಾಖಲೆಗಳನ್ನು ಅಂತಿಮವಾಗಿ ಸಲ್ಲಿಸಿದ್ದಾರೆ. ಹೀಗಾಗಿ, ಇನ್ನೇನು ಎರಡು ತಿಂಗಳೊಳಗಾಗಿ ಇಂಡಿಯ ಲಿಂಬೆ ಹಣ್ಣಿಗೆ ಜಿಐ ಟ್ಯಾಗ್ ದೊರೆಯುವ ಸಾಧ್ಯತೆಗಳಿವೆ.
ಲಿಂಬೆ ಇತಿಹಾಸ : ಬರಗಾಲ ಪ್ರದೇಶವಾಗಿದ್ದರೂ ಸಹ ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳನ್ನ ಬೆಳೆಯಲಾಗುತ್ತಿದೆ. ಕೇವಲ ಲಿಂಬೆ ಹಣ್ಣನ್ನು ಜಿಲ್ಲೆಯಲ್ಲಿ ಪ್ರತಿ ವರ್ಷ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಇಂಡಿ ತಾಲೂಕು ಜತೆ ವಿಜಯಪುರ, ದೇವರಹಿಪ್ಪರಗಿ, ಅರ್ಥಗಾ ಸೇರಿದಂತೆ ಹಲವು ಪ್ರದೇಶದಲ್ಲಿ ಹೆಚ್ಚು ನಿಂಬೆ ಬೆಳೆ ಬೆಳೆಯಲಾಗುತ್ತಿದೆ. ಈ ಜಿಲ್ಲೆಯಲ್ಲಿ ಬೆಳೆಯುವ ಲಿಂಬೆ ಹಣ್ಣು ವಿಶೇಷವಾಗಿದೆ.
ಲಿಂಬೆಯ ಪದರು ತಿಳು ಆಗಿರುತ್ತದೆ. ರಸ ಹೆಚ್ಚು ಇರುವ ಕಾರಣ ದೇಶ-ವಿದೇಶಗಳಿಂದ ಹೆಚ್ಚಿನ ಬೇಡಿಕೆ ಇದೆ. ಇತ್ತೀಚಿಗೆ ಜಿಯೋಗ್ರಾಫಿಕ್ ಇಂಡಿಕೇಷನ್ ರಿಜಿಸ್ಟರ್ ಆಫ್ ಗೂಡ್ಸ್ ಇಲಾಖೆಗೆ ಜಿಲ್ಲಾ ತೋಟಗಾರಿಕೆ ಇಲಾಖೆ ಕಳುಹಿಸಿದ ಮಾಹಿತಿಗೆ ಅನುಗುಣವಾಗಿ ಜಿಐ ಟ್ಯಾಗ್ ಲಭಿಸಲಿದೆ. ಈ ಟ್ಯಾಗ್ ಮೂಲಕ ಜಿಲ್ಲೆ ನಿಂಬೆಗೆ ಇನ್ನೂ ಹೆಚ್ಚಿನ ಬೇಡಿಕೆ ಜತೆ ಹೆಚ್ಚಿನ ಲಾಭವನ್ನೂ ಸಹ ಲಿಂಬೆ ಬೆಳೆಗಾರ ಬೆಳೆಯಬಹುದಾಗಿದೆ.
ಓದಿ: 21 ವರ್ಷಗಳ ಕಾಲ ದೂರವಿದ್ದು ಬದುಕುತ್ತಿದ್ದ ದಂಪತಿಗೆ ವಿಚ್ಛೇದನ ನೀಡಿದ ಹೈಕೋರ್ಟ್