ವಿಜಯಪುರ: ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ರಾತ್ರಿ ಕಾರು ಬಿಟ್ಟು ಓಡಿ ಹೋಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿ.ಟಿ ರವಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉತ್ತರ ಕರ್ನಾಟಕ ನೆರೆ ಪರಿಹಾರ ವಿಳಂಬ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ, ನನ್ನ ಉದ್ದೇಶದಲ್ಲಿ ಉತ್ತರ ಕರ್ನಾಟಕದ ಹಿತವಿದೆ. ನಾನೇನು ಮಂತ್ರಿಯಾಗಬೇಕೆಂದು ಯಾರಿಗೂ ಕೈ ಕಾಲು ಹಿಡಿದಿಲ್ಲ. ನನಗೆ ಮಂತ್ರಿ ಸ್ಥಾನ ಬೇಕಿಲ್ಲ, ಬಸನಗೌಡ ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಅರ್ಹತೆ ಇದ್ದರೆ ಮಂತ್ರಿಯಾಗುತ್ತಾರೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ನನ್ನ ಅರ್ಹತೆ ನೋಡಿ ಕೇಂದ್ರದಲ್ಲಿ ಮಂತ್ರಿ ಮಾಡಿದ್ರು. ನನಗೆ ಗ್ರಾಮೀಣಾಭಿವೃದ್ಧಿ ಖಾತೆ ಕೊಡಲಿಲ್ಲ, ಕಂದಾಯ ಖಾತೆ ಕೊಟ್ಟಿಲ್ಲ ಅಂತ ಯಾವತ್ತೂ ನಾನು ದೂರಿಲ್ಲ. ನಾನು ಕಾರು ಬಿಟ್ಟು ಓಡಿ ಹೋಗಿಲ್ಲ ಎಂದು ಸಿ ಟಿ ರವಿಗೆ ತಿರುಗೇಟು ನೀಡಿದರು.