ETV Bharat / state

ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಿಂದ ಇತಿಹಾಸ ಸೃಷ್ಟಿ: ಎ.ಎಸ್. ಪಾಟೀಲ ನಡಹಳ್ಳಿ... - ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಅನೇಕ ವರ್ಷಗಳ ನಂತರ ತಾಳಿಕೋಟಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಮಹತ್ತರ ಘಟ್ಟವಾಗಿದೆ ಎಂದು ಹೇಳಿದರು.

muddhebihala
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
author img

By

Published : Nov 10, 2020, 9:47 PM IST

ಮುದ್ದೇಬಿಹಾಳ: ತಾಳಿಕೋಟಿ ಪುರಸಭೆಯ ಆಡಳಿತ ಮಂಡಳಿಗೆ ಈ ಹಿಂದೆ ಎಂದಿಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅವಿರೋಧ ಆಯ್ಕೆ ನಡೆದಿರಲಿಲ್ಲ. ಆದರೆ ಇಂದು ನಡೆದಿರುವ ಆಯ್ಕೆ ಇತಿಹಾಸವನ್ನು ಸೃಷ್ಟಿಸಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ

ಪಟ್ಟಣದ ಪಾಂಡುರಂಗ ವಿಠ್ಠಲ ದೇವಸ್ಥಾನದ ಆವರಣದಲ್ಲಿ ನೂತನ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಸಂಗಮೇಶ ಇಂಗಳಗಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ಆಡಳಿತ ಮಂಡಳಿಯ ದೃಷ್ಟಿಯಿಂದ ಬಿಜೆಪಿಗೆ ಐತಿಹಾಸಿಕ ದಿನವಾಗಿದೆ. ನಗರದ ಜನರಿಗೆ ಸಂತೋಷ ಕೊಡುವ ದಿನವಾಗಿದೆ. ಅನೇಕ ವರ್ಷಗಳ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಮಹತ್ತರ ಘಟ್ಟವಾಗಿದೆ ಎಂದು ಹೇಳಿದರು.

ಎಸ್​ಟಿ ಪರ ಬೆಂಬಲವಾಗಿ ನಿಲ್ಲುವುದಷ್ಟೇ ಅಲ್ಲದೇ ಅಧಿಕಾರ ಕೊಡಬೇಕು ಎಂಬ ಉದ್ದೇಶದಿಂದ ಎಸ್​ಟಿ ವರ್ಗದವರ ಆಶಯವನ್ನು ಸಿಎಂ ಯಡಿಯೂರಪ್ಪನವರು ಈಡೇರಿಸಿದ್ದಾರೆ. ಬೆಂಗಳೂರಿನಲ್ಲಿ ತಾಳಿಕೋಟಿ ನಗರಕ್ಕೆ 10 ಕೋಟಿ ರೂ. ಸಿಎಂ ವಿವೇಚನಾ ಕೋಟಾದಡಿ ಅನುದಾನ ಕೊಟ್ಟಿದ್ದಾರೆ. ಶಾಸಕನಾಗಿ ಅಧ್ಯಕ್ಷ ಉಪಾಧ್ಯಕ್ಷರಿಬ್ಬರನ್ನು ಅಭಿನಂದಿಸುತ್ತೇನೆ. ಪುರಸಭೆ ಇತಿಹಾಸದಲ್ಲಿ ಎಸ್‌ಟಿ ವರ್ಗದವರಿಗೆ ಅಧಿಕಾರ ಸಿಕ್ಕಿರಲಿಲ್ಲ. ಅವರಿಗೆ ಮೀಸಲಾತಿ ಅಡಿ ಅಧ್ಯಕ್ಷ ಸ್ಥಾನಕ್ಕೆ ಕೂಡಲು ಅವಕಾಶ ದೊರಕಿದೆ ಎಂದರು.

ಇನ್ನು ನೂತನ ಅಧ್ಯಕ್ಷ ಸಂಗಮೇಶ ಇಂಗಳಗಿ ಮಾತನಾಡಿ, ಬಿಜೆಪಿಯ ಪಾರ್ಟಿಯೊಂದಿಗೆ ನಾನು ಗುರುತಿಸಿಕೊಂಡಿದ್ದೇನೆ. ಆದರೆ ಪುರಸಭೆಯಲ್ಲಿ ಎಲ್ಲಾ ಸದಸ್ಯರ ಸಹಕಾರ ಪಡೆದುಕೊಂಡು ಆಡಳಿತ ನಡೆಸುತ್ತೇನೆ. ಶಾಸಕರು ಹಾಗೂ ಇನ್ನುಳಿದ ನಮ್ಮ ಊರಿನ ಸದಸ್ಯರು ಹೇಳುವ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.