ETV Bharat / state

ಧಾರ್ಮಿಕ ಸಾಮರಸ್ಯ: ರೋಜಾ ಮಾಡಿದ ಮುಸ್ಲಿಂ ಬಾಲಕಿಗೆ ಹಿಂದೂವಿನ ಮನೆಯಲ್ಲಿ ಸತ್ಕಾರ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳೆರಡು ಸ್ನೇಹದ ಬಾಂಧವ್ಯಕ್ಕೆ ಭಾವೈಕ್ಯತೆಯ ರೂಪವನ್ನು ನೀಡುವ ಮೂಲಕ ಹಿಂದೂ-ಮುಸ್ಲಿಂಮರು ಸಹೋದರರು ಎಂದು ಸಾರುವ ಮಾದರಿ ಕಾರ್ಯ ಮಾಡಿವೆ.

hindu-muslim-harmony-in-vijyapura
ರೋಜಾ ಮಾಡಿದ ಮುಸ್ಲಿಂ ಬಾಲಕಿಗೆ ಹಿಂದೂವಿನ ಮನೆಯಲ್ಲಿ ಸತ್ಕಾರ
author img

By

Published : Apr 20, 2022, 10:07 AM IST

Updated : Apr 20, 2022, 12:37 PM IST

ಮುದ್ದೇಬಿಹಾಳ(ವಿಜಯಪುರ) : ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಕೆಲವು ಕ್ಷುದ್ರ ಸಂಕುಚಿತ ಮನಸ್ಸುಗಳ ಮಧ್ಯೆ ಹಿಂದೂ ಹಾಗೂ ಮುಸ್ಲಿಮರು ಅಣ್ಣ-ತಮ್ಮಂದಿರು ಎಂಬ ಸಂದೇಶ ಸಾರುವ ಕಾರ್ಯವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳೆರಡು ಮಾಡುವ ಮೂಲಕ ಭಾವೈಕ್ಯತೆಯನ್ನು ಎತ್ತಿಹಿಡಿದಿವೆ.

ಆ ಎರಡು ಕುಟುಂಬಗಳ ಒಡನಾಟಕ್ಕೆ ಐವತ್ತು ವರ್ಷದ ಗೆಳೆತನವೇ ಸಾಕ್ಷಿ ಒದಗಿಸಿದೆ. ಪಟ್ಟಣದ ಹೊರಪೇಟಿ ಗಲ್ಲಿಯಲ್ಲಿರುವ ಬ್ರಾಹ್ಮಣ ಸಮಾಜದ ವಾಸುದೇವ ನಾರಾಯಣರಾವ್ ಶಾಸ್ತ್ರಿ ಹಾಗೂ ಫೋಟೋಗ್ರಾಫರ್ ಆಗಿರುವ ಅಲ್ಲಿಸಾಬ (ಬುಡ್ಡಾ) ಬಾ.ಕುಂಟೋಜಿ ಅವರ ಸ್ನೇಹದ ಬಾಂಧವ್ಯಕ್ಕೆ ಭಾವೈಕ್ಯತೆಯ ರೂಪವನ್ನು ನೀಡುವ ಮೂಲಕ ಹಿಂದೂ-ಮುಸ್ಲಿಮರು ಸಹೋದರರು ಎಂದು ಸಾರುವ ಮಾದರಿ ಕಾರ್ಯ ಮಾಡಿದ್ದಾರೆ.

ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ

ಮುಸ್ಲಿಂ ಬಾಲಕಿಗೆ ಹಿಂದೂ ಸಂಪ್ರದಾಯದಂತೆ ಗೌರವ: ಅಲ್ಲಿಸಾಬ ಕುಂಟೋಜಿ ಅವರ ಮೊಮ್ಮಗಳಾಗಿರುವ ಆರು ವರ್ಷದ ಬಾಲಕಿ ಶಿಫಾನಾಜ್ ಮಹ್ಮದ್​​ ರಫೀಕ್​ ಸಾತಕೇಡ ಅವರ ಮಗಳು ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಸಂಜೆ ಆರು ಗಂಟೆಯವರೆಗೆ ರಂಜಾನ್ ಹಬ್ಬದ ನಿಮಿತ್ತ ರೋಜಾ ಆಚರಿಸಿದ್ದಾಳೆ. ಇದನ್ನು ಅರಿತುಕೊಂಡ ಬುಡ್ಡಾ ಕುಂಟೋಜಿ ಅವರ ಬಾಲ್ಯದ ಸ್ನೇಹಿತರಾದ ವಾಸುದೇವ ಶಾಸ್ತ್ರಿ ಅವರು ಶಿಫಾನಾಜ್‌ಗೆ ಗೌರವಿಸಲು ನಿರ್ಧರಿಸಿದ್ದಾರೆ. ಅದಕ್ಕೆ ಮುಸ್ಲಿಂ ಸಮಾಜದವರಾದ ಕುಂಟೋಜಿ ಪರಿವಾರದವರ ಒಪ್ಪಿಗೆ ಪಡೆದುಕೊಂಡು ಶಾಸ್ತ್ರಿ ಅವರು ತಮ್ಮ ಮನೆಗೆ ಕರೆತಂದು ಸತ್ಕಾರ ಮಾಡಿದ್ದಾರೆ.

ಹಿಂದೂ ಸಂಪ್ರದಾಯದಂತೆ ಗೌರವ: ರೋಜಾ ಮಾಡಿದ ಶಿಫಾನಾಜ್‌ಗೆ ಶಾಸ್ತ್ರಿ ಅವರ ಮನೆಯಲ್ಲಿ ಹಿಂದೂಗಳ ಸಂಪ್ರದಾಯದಂತೆ ಆರತಿ ಬೆಳಗಿ, ಹೊಸ ಬಟ್ಟೆ ಕೊಟ್ಟು ಆಕೆಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ವಿಶೇಷವೆಂದರೆ ಶಾಸ್ತ್ರಿಯವರ ಮಕ್ಕಳಾದ ಗೌರಿ ಹಾಗೂ ರಾಣಿ ಎಂಬುವವರು ಬಾಲಕಿ ಶಿಫಾನಾಜ್‌ಗೆ ಮುಸ್ಲಿಂ ಧರ್ಮೀಯರು ಧರಿಸುವ ಮಾದರಿಯಲ್ಲಿಯೇ ವಸ್ತ್ರವನ್ನು ಸುತ್ತಿ ಮುದ್ದಿಸುವ ದೃಶ್ಯ ಎರಡೂ ಕುಟುಂಬಗಳ ಅನ್ಯೋನ್ಯತೆಗೆ ಸಾಕ್ಷಿಯಾಗಿದೆ.

ಹಿಂದೂ ಸಂಪ್ರದಾಯವನ್ನು ಗೌರವಿಸುವ ಮುಸ್ಲಿಮರು: ತಮ್ಮ ಮಗಳು ಮೊದಲನೇ ರೋಜಾ ಮಾಡಿದ್ದಕ್ಕೆ ಸಂಭ್ರಮಿಸಿದ ಶಾಸ್ತ್ರಿ ಕುಟುಂಬದವರ ಆತಿಥ್ಯ ಸ್ವೀಕರಿಸಲು ಅವರ ಮನೆಗೆ ಹೋದ ಮಹ್ಮದ್​ ರಫೀಕ್​ ಸಾತಖೇಡ ಹಾಗೂ ಅವರ ಪತ್ನಿ ಫಿರ್ದೋಷ್ ಅವರು ಮಗಳಿಗೆ ಆರತಿ ಎತ್ತಿ ಹೂ ಮುಡಿಸುವುದನ್ನು ಗೌರವ ಭಾವನೆಯಿಂದಲೇ ಸ್ವೀಕರಿಸಿದರು. ಅಲ್ಲದೆ ಈ ಆಚರಣೆಯ ಬಗ್ಗೆ ಖುಷಿಯಾಗಿದೆ ಎಂದು ಹೇಳಿಕೊಂಡರು.

ಇದನ್ನೂ ಓದಿ: ಡಿಕೆಶಿ ಆತಂಕಕ್ಕೆ ಒಳಗಾಗುವುದು ಬೇಡ, ಕಾನೂನು ಬದ್ಧವಾಗಿ ತನಿಖೆ ನಡೆಯುತ್ತೆ: ಸಿಎಂ ಬೊಮ್ಮಾಯಿ

Last Updated : Apr 20, 2022, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.