ETV Bharat / state

ವಿಜಯಪುರ: ಡೋಣಿ ನದಿ ಸೇತುವೆಯಲ್ಲಿ ಸಿಲುಕಿದ ಎತ್ತಿನ ಬಂಡಿ

ಡೋಣಿ ನದಿ ಸೇತುವೆ ದಾಟಲು ಹೋದ ಎತ್ತಿನ ಬಂಡಿಯೊಂದು ನಡು ನೀರಿನಲ್ಲಿ ಸಿಲುಕಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

Doni river
ಎತ್ತಿನ ಬಂಡಿ
author img

By

Published : Sep 9, 2020, 4:00 PM IST

ವಿಜಯಪುರ: ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ತಾಳಿಕೋಟೆ ಹಡಗಿನಾಳ ಸಂಪರ್ಕದ ಡೋಣಿ ನದಿ ತುಂಬಿ ಹರಿಯುತ್ತಿದೆ. ಈ ಸೇತುವೆ ದಾಟಲು ಹೋದ ಎತ್ತಿನ ಬಂಡಿಯೊಂದು ನಡು ನೀರಿನಲ್ಲಿ ಸಿಲುಕಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಡೋಣಿ ನದಿ ಸೇತುವೆಯಲ್ಲಿ ಸಿಲುಕಿರುವ ಎತ್ತಿನ ಬಂಡಿ

ಹಡಗಿನಾಳದಿಂದ ತಾಳಿಕೋಟೆಗೆ ಬರುವ ರಸ್ತೆ ಮಧ್ಯೆದ ಡೋಣಿ ನದಿಯಲ್ಲಿ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿತ್ತು. ಇಲ್ಲಿದ್ದ ಚಿಕ್ಕಸೇತುವೆ ಸಂಪೂರ್ಣ ಮುಳುಗಡೆಗೊಂಡಿತ್ತು. ಈ ವೇಳೆ ಬಂಡ ಧೈರ್ಯ ಮಾಡಿದ ಇಬ್ಬರು ತಮ್ಮ ಎತ್ತಿನ ಬಂಡಿ ತೆಗೆದುಕೊಂಡು ತುಂಬಿದ ಸೇತುವೆ ದಾಟಲು ಯತ್ನಿಸಿದ್ದಾರೆ. ಮಧ್ಯೆ ನೀರು ಹೆಚ್ಚಾಗಿ ಹರಿವು ಮತ್ತಷ್ಟು ತೀವ್ರಗೊಂಡಿದೆ. ಇದರಲ್ಲಿ ಒಂದು ಎತ್ತು ಸೇತುವೆ ಒಂದು ಭಾಗಕ್ಕೆ ಜಾರಿಕೊಂಡಿದೆ. ಅಪಾಯ ಅರಿತ ಗ್ರಾಮದ ಕೆಲವರು ಸಹಾಯಕ್ಕೆ ದೌಡಾಯಿಸಿ ಎತ್ತಿನ ಬಂಡಿಯನ್ನು ಎಳೆದು ತಡ ಸೇರಿಸಿದ್ದಾರೆ.

ಸ್ವಲ್ಪ ತಡವಾಗಿದ್ದರು ಎರಡು ಎತ್ತುಗಳ ಜತೆ ಅದರಲ್ಲಿ‌ ಸವಾರಿ ಮಾಡುತ್ತಿದ್ದ ವ್ಯಕ್ತಿಗಳು ಸಹ ನೀರಿನ ಹರಿವಿಗೆ ಸಿಲುಕಿಕೊಂಡು ಅನಾಹುತ ಮಾಡಿಕೊಳ್ಳುತ್ತಿದ್ದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಆಗಬೇಕಾಗಿದ್ದ ಅನಾಹುತ ತಪ್ಪಿದಂತಾಗಿದೆ.

ಸೇತುವೆ ಅಪೂರ್ಣ: ಡೋಣಿ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಟೆಂಡರ್ ಅವಧಿ ಮುಗಿದರೂ ಸಹ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಸಲ ಮಳೆ ಬಂದಾಗ ಡೋಣಿ ನದಿಯ ಈ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.