ETV Bharat / state

ಕಾಂಗ್ರೆಸ್​​-ಬಿಜೆಪಿಗೆ ಮತ ನೀಡಿದ್ರೆ ಇನ್ನೂ 70 ವರ್ಷವಾದ್ರೂ ನೀರು ಬರೋಲ್ಲ: ಹೆಚ್​ಡಿಕೆ

ಈ ಯಾತ್ರೆ ಅಧಿಕಾರ ಹಿಡಿಯಲು ಅಲ್ಲ. ಜನರ ನೆಮ್ಮದಿ, ಅಭಿವೃದ್ಧಿಗಾಗಿ. ಹೀಗಾಗಿ, ಯಾವುದೇ ಅಧಿಕಾರದ ಆಸೆಯಿಂದ ಯಾತ್ರೆ ಮಾಡುತ್ತಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಗೂ ಮುಖ್ಯಮಂತ್ರಿ ಆಗಿದ್ದಾಗ ಈ ಭಾಗಕ್ಕೆ ನೀಡಿದ ಕೊಡುಗೆ ಏನು ಎಂಬುದು ಈಗಿನ ಯುವಕರಿಗೆ ಗೊತ್ತಿಲ್ಲ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು..

ಕಾಂಗ್ರೆಸ್​​-ಬಿಜೆಪಿಗೆ ಮತ ನೀಡಿದ್ರೆ ಇನ್ನೂ 70 ವರ್ಷಯಾದ್ರೂ ನೀರು ಬರೋಲ್ಲ: ಎಚ್​ಡಿಕೆ

author img

By

Published : Apr 16, 2022, 6:10 PM IST

ವಿಜಯಪುರ : ನನಗೆ 5 ವರ್ಷ ಅಧಿಕಾರ ಕೊಡಿ. ನಾನು ನೀಡಿದ ಭರವಸೆ ಈಡೇರಿಸದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡಿ, ರಾಜಕೀಯದಿಂದಲೇ ದೂರ ಉಳಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು. ಅಲ್ಲದೇ, ನನಗೆ ಅಧಿಕಾರದ ಆಸೆ ಇಲ್ಲ. ಈ ಹಿಂದೆ ರಾಜ್ಯದ ಜನತೆ ಕಣ್ಣೀರು ಒರೆಸಬೇಕೆಂಬ ದೃಷ್ಟಿಯಿಂದ ಎರಡು ಬಾರಿ ಬೇರೆ, ಬೇರೆ ಪಕ್ಷಗಳ ಜೊತೆಗೆ ಸೇರಿ ಅಧಿಕಾರ ನಿರ್ವಹಿಸಿದ್ದೇನೆ ಎಂದರು.

ಕಾಂಗ್ರೆಸ್​​-ಬಿಜೆಪಿ ವಿರುದ್ಧ ಗುಡುಗಿದ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ..

ಜಿಲ್ಲೆಯ ಆಲಮಟ್ಟಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಜನರು ನೆಮ್ಮದಿಯಿಂದ ಜೀವನ ನಡೆಸಬೇಕು ಎನ್ನುವ ದೃಷ್ಟಿಯಿಂದ ಕೆಲವು ವಿಷಯಗಳನ್ನು ಪ್ರಸ್ತಾಪಿಸುತ್ತೇನೆ. ಈ ಭಾಗದ ಜನರ ಬಡತನ ಹೋಗಲಾಡಿಸಲು ಸಾಧ್ಯವಿಲ್ಲವಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಜನರ ಕಣ್ಣೀರು ಒರೆಸುವುದು ಬೇಕಾಗಿಲ್ಲ. ಎರಡು ಪಕ್ಷಗಳು ಕೇವಲ ದುಡ್ಡು ಹೊಡೆಯುವುದರಲ್ಲಿ ನಿರತವಾಗಿವೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಜನತಾ ಜಲಧಾರೆಗೆ ಚಾಲನೆ : ಕಣಕುಂಬಿಯಲ್ಲಿ ಮಲಪ್ರಭೆಗೆ ಪೂಜೆ ಸಲ್ಲಿಸಿದ ಸಂಸದ ಪ್ರಜ್ವಲ್ ರೇವಣ್ಣ

ಈ ಯಾತ್ರೆ ಅಧಿಕಾರ ಹಿಡಿಯಲು ಅಲ್ಲ. ಜನರ ನೆಮ್ಮದಿ, ಅಭಿವೃದ್ಧಿಗಾಗಿ. ಹೀಗಾಗಿ, ಯಾವುದೇ ಅಧಿಕಾರದ ಆಸೆಯಿಂದ ಯಾತ್ರೆ ಮಾಡುತ್ತಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಗೂ ಮುಖ್ಯಮಂತ್ರಿ ಆಗಿದ್ದಾಗ ಈ ಭಾಗಕ್ಕೆ ನೀಡಿದ ಕೊಡುಗೆ ಏನು ಎಂಬುದು ಈಗಿನ ಯುವಕರಿಗೆ ಗೊತ್ತಿಲ್ಲ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡಬೇಕು ಎಂದು ಕರೆ ನೀಡಿದರು.

70 ವರ್ಷ ಆದ್ರೂ ನೀರು ಬರೋಲ್ಲ: ಕಾಂಗ್ರೆಸ್​ ಹಾಗೂ ಬಿಜೆಪಿ ಇಲ್ಲಿಯವರೆಗೆ ನೀರಾವರಿಯ ವಿಚಾರ ಕುರಿತು ಏನು ಮಾಡಿಲ್ಲ. ಇವರಿಗೆ ಮತ ನೀಡಿದರೆ ಇನ್ನೂ 70 ವರ್ಷವಾದರೂ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲ್ಲ. ನಾನು ರಾಜ್ಯದ ನೀರಾವರಿಗಾಗಿ ಯೋಜನೆ ರೂಪಿಸಿದ್ದು, ಇದಕ್ಕೆ 5 ರಿಂದ 6 ಲಕ್ಷ ಕೋಟಿ ಯೋಜನೆ ಹಾಕಿಕೊಂಡಿದ್ದೇನೆ. ಇದಕ್ಕಾಗಿ ಈ ಬಾರಿ ಜೆಡಿಎಸ್​ಗೆ ಬೆಂಬಲ ನೀಡಿ ಎಂದು ಹೆಚ್​ಡಿಕೆ ಮನವಿ ಮಾಡಿದರು.

ಜಾತಿ ಆಧಾರದ ಮೇಲೆ ಮತ ಬೇಡ : ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಮತ ಕೊಡುವುದನ್ನು ನಿಲ್ಲಿಸಬೇಕು. ಯಾರು ಕೆಲಸ ಮಾಡುತ್ತಾರೆ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಮತ ಹಾಕಿ. ಜೆಡಿಎಸ್​ಗೆ ನೀಡಿದ ಮತ ಯಾವತ್ತಿಗೂ ವ್ಯರ್ಥ ಆಗಲು ಬಿಡುವುದಿಲ್ಲ. ಈಗಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಗುತ್ತಿಗೆದಾರರಿಂದ ಕಮೀಷನ್ ಪಡೆಯುವಲ್ಲಿ ನಿರತವಾಗಿವೆ. ಆದರೆ, ನಮ್ಮ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐದು ಅಂಶಗಳ ಆಧಾರದ ಮೇಲೆ ಮತ ಕೇಳುತ್ತೇವೆ ಎಂದರು.

ರಾಜ್ಯದ ಸಮಗ್ರ ನೀರಾವರಿಗೆ 5 ಲಕ್ಷ ಕೋಟಿ ರೂಪಾಯಿ ಮೀಸಲಿಡುತ್ತೇವೆ. 6 ಸಾವಿರ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪಬ್ಲಿಕ್ ಶಾಲೆ ಮಾದರಿಯಲ್ಲಿ 1ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ. ಎಲ್ಲ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 30 ಆಕ್ಸಿಜನ್ ಬೆಡ್​ಗಳ ಆಸ್ಪತ್ರೆ ನಿರ್ಮಾಣ. ಬಡ ಜನರಿಗೆ ಉಚಿತ ಅಂಗಾಂಗಗಳ ಜೋಡಣೆಗೆ ವ್ಯವಸ್ಥೆ. ಅಪೌಷ್ಟಿಕತೆ ನಿವಾರಣೆಗಾಗಿ ಗರ್ಭಿಣಿಯರಿಗೆ 6 ತಿಂಗಳಿನಿಂದ 1 ವರ್ಷದವರೆಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ವಿವರಿಸಿದರು.

ಇದನ್ನೂ ಓದಿ: ಈಶ್ವರಪ್ಪರನ್ನು ಬಂಧಿಸಿ ಕಾಂಗ್ರೆಸ್ ನಾಯಕರು ಏನು ಮಾಡುತ್ತಾರೆ? ಹೆಚ್​​ಡಿಕೆ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.