ಮುದ್ದೇಬಿಹಾಳ: ಪಟ್ಟಣದ ಶಿರಸ್ತೇದಾರರು ಎ.ಬಿ.ಹಿರೇಮಠ ಅವರಿಗೆ ಹಡಪದ ಅಪ್ಪಣ್ಣ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
![hadapada appana society disregard Appeal to Tahsildar](https://etvbharatimages.akamaized.net/etvbharat/prod-images/kn-mbl-hadapadsamaja-9-03-kac10030_09062020145528_0906f_1591694728_700.jpg)
ಶಿಕ್ಷಕ ಎ.ಬಿ.ಹಡಪದ ಮಾತನಾಡಿ, 2.30 ಲಕ್ಷ ಕ್ಷೌರಿಕ ವೃತ್ತಿದಾರರಿಗೆ ಸರ್ಕಾರ ತಲಾ ಐದು ಸಾವಿರ ರೂ.ಗಳ ಆರ್ಥಿಕ ನೆರವನ್ನು ಘೋಷಣೆ ಮಾಡಿದೆ. ಕ್ಷೌರಿಕ ಕಸುಬು ಮಾಡುವವರಲ್ಲಿ ಶೇ.70 ರಷ್ಟು ಜನರು ಹಡಪದ ಸಮಾಜದವರಿದ್ದು, ಅವರ ಹೆಸರನ್ನು ಕಡೆಗಣಿಸಿ ಕೇವಲ ಸವಿತಾ ಸಮಾಜದ ಹೆಸರನ್ನು ಪರಿಗಣಿಸುತ್ತಿರುವ ಕ್ರಮಕ್ಕೆ ಹಡಪದ ಅಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದರು.
![hadapada appana society disregard Appeal to Tahsildar](https://etvbharatimages.akamaized.net/etvbharat/prod-images/kn-mbl-hadapadsamaja-9-03-kac10030_09062020145528_0906f_1591694728_523.jpg)
ಹಡಪದ ಅಪ್ಪಣ್ಣ ಸಮಾಜದವರಿಗೆ ಪುರಸಭೆ ಅಧಿಕಾರಿಗಳು ಹಾಗೂ ಪಿ.ಡಿ.ಒ, ಕ್ಷೌರಿಕ ಉದ್ಯೋಗ ಮಾಡುತ್ತಿರುವವರು ಎಂದು ಸೇವಾ ಪ್ರಮಾಣಪತ್ರ ನೀಡಲು ಆದೇಶಿಸಬೇಕು ಎಂದು ಅವರು ಮನವಿ ಮಾಡಿದರು.
ಸಮಾಜದ ಅಧ್ಯಕ್ಷ ಶಂಕ್ರಪ್ಪ ಹಡಪದ, ಚಂದಪ್ಪ ಹಡಪದ, ಬಸವರಾಜ ಅಬ್ಬಿಹಾಳ, ಪ್ರಲ್ಹಾದ ಹಡಪದ, ಬಸವರಾಜ ಹಡಪದ, ಈರಣ್ಣ ಇಡ್ಲೂರ, ಶಂಕ್ರಪ್ಪ ಬಿದರಕುಂದಿ, ಕಾಶೀನಾಥ ಹಡಪದ ಮೊದಲಾದವರು ಇದ್ದರು.