ವಿಜಯಪುರ: ಆದರ್ಶನಗರದ ಜ್ಞಾನಯೋಗಾಶ್ರಮದಲ್ಲಿ ಸಂಭ್ರಮದಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಹುಣ್ಣಿಮೆ ದಿನದಂದು ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
1903 ರ ಅಕ್ಟೋಬರ್ ತಿಂಗಳಲ್ಲಿ ಅವತರಿಸಿದ ಮಲ್ಲಿಕಾರ್ಜುನ ಶ್ರೀಗಳು ಗದ್ದಲ ಶಿವಾನಂದ ಸ್ವಾಮೀಜಿಗಳ ಬಳಿಕ ಶಿಕ್ಷಣ ಪಡೆದು ಗುರುಗಳ ಅಣತೆಯಂತೆ ದೇಶ ಸಂಚರಿಸಿ ವಿಜಯಪುರಕ್ಕೆ ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಅವರ ಪ್ರವಚನ ಜಿಲ್ಲೆಯಲ್ಲಿ ಹೆಚ್ಚು ಖ್ಯಾತಿ ಪಡೆದು ಅವರ ಜ್ಞಾನ ಆಲಿಸಿದ ಭಕ್ತರು, ವೇದಾಂತ ಕೇಸರಿ ಎಂದು ಬಿರುದು ನೀಡಿ ಗೌರವಿಸಿದರು.
ಇಂದು ಗುರುಪೂರ್ಣಿಮಾ ಹಿನ್ನೆಲೆಯಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸು. 300 ಕ್ಕೂ ಹೆಚ್ಚು ಸ್ವಾಮೀಜಿಗಳು ಮತ್ತು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.