ವಿಜಯಪುರ: ಗ್ರಾಮ ಪಂಚಾಯತ್ ಚುನಾವಣೆಗೆ ಮೊದಲ ಹಂತದಲ್ಲಿ 7,533 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಸುಮಾರು 81 ನಾಮಪತ್ರಗಳನ್ನು ತಿರಸ್ಕೃತಗೊಂಡಿವೆ. 7,232 ನಾಮಪತ್ರ ಸ್ವೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ 12 ತಾಲೂಕಿನ ಸುಮಾರು 212 ಗ್ರಾಮ ಪಂಚಾಯತ್ಗಳ ಪೈಕಿ 201 ಗ್ರಾಮ ಪಂಚಾಯತ್ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ 8 ತಾಲೂಕುಗಳ 111 ಗ್ರಾ. ಪಂ.ಗಳ 2,126 ಸದಸ್ಯ ಸ್ಥಾನಕ್ಕೆ ಡಿ. 22 ರಂದು ಮತದಾನ ನಡೆಯಲಿದೆ ಅವರು ಮಾಹಿತಿ ನೀಡಿದರು.
ಓದಿ : ವಿಜಯಪುರದಲ್ಲಿ ನಗರ ಸಾರಿಗೆ ಬಸ್ ಅಡ್ಡಗಟ್ಟಿ ಜಗಳಕ್ಕಿಳಿದ ಪಾನಮತ್ತ ಕಂಡಕ್ಟರ್
ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇಲ್ಲಿಯವರೆಗೆ 7,533 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಗೆ ನಾಮ ಪತ್ರ ಸಲ್ಲಿಸಿದ್ದಾರೆ. ಇದರಲ್ಲಿ 81 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 7,232 ನಾಮಪತ್ರ ಸ್ವೀಕೃತಗೊಂಡಿವೆ. ವಿಜಯಪುರ ತಾಲೂಕು- 1,293, ತಿಕೋಟಾ- 926, ನಿಡಗುಂದಿ- 468, ಮುದ್ದೇಬಿಹಾಳ- 1,109, ತಾಳಿಕೋಟೆ- 1,002, ಬಬಲೇಶ್ವರ-1,001, ಬಾಗೇವಾಡಿ 987, ಕೊಲ್ಹಾರ 446 ಸೇರಿ ಒಟ್ಟು 7,233 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ. ನಾಮಪತ್ರ ಹಿಂಪಡೆಯಲು ಡಿ.14 ಕೊನೆ ದಿನವಾಗಿದೆ. ಡಿ. 22ರಂದು ಮತದಾನ ನಡೆಯಲಿದೆ.