ETV Bharat / state

ಜನರನ್ನು ಆ ದೇವರೇ ಕಾಪಾಡಬೇಕು.. ಸಚಿವ ನಿರಾಣಿ ಅಸಹಾಯಕತೆ!

author img

By

Published : May 3, 2021, 9:01 PM IST

ಇಂತಹ ಸನ್ನಿವೇಶದಲ್ಲಿ ಭಗವಂತನೇ ಜನರನ್ನು ಕಾಪಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ದೇವರ ಮೇಲೆ ಭಾರ ಹಾಕುವ ಮೂಲಕ ಸರ್ಕಾರ ಕೈಚೆಲ್ಲಿದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

god should save people says minister murugesh nirani

ವಿಜಯಪುರ: ಚಾಮರಾಜನಗರದಲ್ಲಿ 24 ಜನರ ಸಾವು ಪ್ರಕರಣ ಕುರಿತು ಸಂಪೂರ್ಣ ತನಿಖೆ ಮಾಡಲಾಗುತ್ತಿದೆ. ಶಿವಯೋಗಿ ಕಳಸದ ಅವರನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಪೋಲಿಸ್ ಸಿಬ್ಬಂದಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕೊವಿಡ್ ಕುರಿತು ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಮೂರು ದಿನದಲ್ಲಿ ರಿಪೊರ್ಟ್ ಕೊಡಲು ಸೂಚಿಸಲಾಗಿದೆ. ಆಕ್ಸಿಜನ್ ಕೊರತೆಯಿಂದಲೋ ಅಥವಾ ಬೇರೆ ಕಾರಣದಿಂದ ಸಾವನಪ್ಪಿದ್ದಾರೆಯೋ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಮುಂದೆ ಹೀಗೆ ಆಗದ ಹಾಗೆ ಸರ್ಕಾರ ಎಚ್ಚರಿಕೆ ವಹಿಸುತ್ತದೆ ಎಂದರು.

ಸಚಿವ ನಿರಾಣಿ ಅಸಹಾಯಕತೆ

ಕೈಗಾರಿಕೆ ಆಕ್ಸಿಜನ್ ರೋಗಿಗಳಿಗೆ ಬಳಕೆ:

ಸದ್ಯ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರಬಹುದು. ಈಗ ಕೈಗಾರಿಕೆಗಳಿಗೆ ಉಪಯೋಗ ಮಾಡುವಂತಹ ಆಕ್ಸಿಜನ್ ಸಹಿತ ಬಳಸಿಕೊಳ್ಳಲಾಗುತ್ತಿದೆ. ನಮ್ಮ ಶುಗರ್ ಫ್ಯಾಕ್ಟರಿ ಸಹಿತ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಬೇಕಾಗುವಷ್ಟು ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಉತ್ಪತ್ತಿ ಮಾಡಲಾಗುತ್ತದೆ. ಮೂರು ತಿಂಗಳಲ್ಲಿ ಈ ಘಟಕ ಪ್ರಾರಂಭವಾಗುತ್ತದೆ ಎಂದ ಸಚಿವ ನಿರಾಣಿ ಹೇಳಿದರು.

ರೆಮ್ಡೆಸಿವಿರ್​ ಇಂಜೆಕ್ಷನ್ ಪೂರೈಸಲು ಪ್ರಯತ್ನ:

ಕೋವಿಡ್ 19 ಇಂದು ಎಲ್ಲೆಡೆ ಹಬ್ಬುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕೋವಿಡ್ ಎವರೇಜ್ ತೆಗೆದುಕೊಂಡರೆ ವಿಜಯಪುರ ಜಿಲ್ಲೆ 27 ಸ್ಥಾನದಲ್ಲಿದೆ. ಕೋವಿಡ್ ತಡೆಗಟ್ಟಲು ವಿಜಯಪುರ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು.

ಮುಖ್ಯವಾಗಿ ಆಕ್ಸಿಜನ್ ರೆಮ್ಡೆಸಿವಿರ್​ ಪೂರೈಸಲು ಸಿ.ಎಂ ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ನೋಡಲ್ ಅಧಿಕಾರಿಗಳನ್ನು ನೇಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಅಂದಾಜು 5800 ರಷ್ಟು ರೆಮ್ಡೆಸಿವಿರ್​ ಇಂಜೆಕ್ಷನ್ ಜಿಲ್ಲೆಗೆ ಬಂದಿದೆ. ವೈದ್ಯರ ಅನುಮತಿ ಪಡೆಯದೇ ರೆಮ್ಡೆಸಿವಿರ್​ ಇಂಜೆಕ್ಷನ್ ಪಡೆಯಬಾರದು. ಬಳ್ಳಾರಿ ಹಾಗೂ ಧಾರವಾಡದಿಂದ ಸಹಿತ ಆಕ್ಸಿಜನ್ ತರಿಸಲಾಗುತ್ತಿದೆ ಎಂದರು.‌

ಪ್ರಧಾನಿ ನರೇಂದ್ರ ಮೋದಿಯವರು 20 ಕಂಪನಿಗಳಿಗೆ ದೇಶದಲ್ಲಿ ರೆಮ್ಡೆಸಿವಿರ್​ ತಯಾರಿಸಲು ಅನುಮತಿ ನೀಡಿದ್ದಾರೆ. ಈಗ ಕರ್ನಾಟಕದಲ್ಲಿ 2 ಕಂಪನಿಗಳಲ್ಲಿ ರೆಮ್ಡೆಸಿವಿರ್​ತಯಾರಿಸಲಾಗುತ್ತಿದೆ. ಇದನ್ನು ತಯಾರಿಸುವ ರಾ ಮಟೆರಿಯಲ್ ಕೇಂದ್ರ ಸರ್ಕಾರ ಪೂರೈಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಭಗವಂತನೇ ಜನರನ್ನು ಕಾಪಾಡಬೇಕು ಎಂದು ಸಚಿವರೇ ದೇವರ ಮೇಲೆ ಭಾರ ಹಾಕುವ ಮೂಲಕ ಸರ್ಕಾರ ಕೈಚೆಲ್ಲಿದೆ ಎನ್ನುವ ಅರ್ಥದಲ್ಲಿ ಮಾಹಿತಿ ನೀಡಿದರು. ಅಧಿಕಾರುಗಳು, ವೈದ್ಯರು ಸಿಬ್ಬಂದಿ ಇಂತಹ ಸನ್ನಿವೇಶದಲ್ಲಿ ಉತ್ತಮ‌ ಕೆಲಸ ಮಾಡುತ್ತಿದ್ದಾರೆ ಎಂದ ಸಚಿವ ನಿರಾಣಿ ಶ್ಲಾಘಿಸಿದರು.

ಸಿಎಂ ಇಳಿವಯಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ:

ಸಿ.ಎಂ.ಯಡಿಯೂರಪ್ಪನವರು 79 ವಯಸ್ಸಿನಲ್ಲಿ ಸಹಿತ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಿ.ಎಂ. ಅವರಿಗೆ ವಯಸ್ಸಾದ ಕಾರಣ ಅವರು ಎಲ್ಲೆಡೆ ಈ ಪರಿಸ್ಥಿತಿಯಲ್ಲಿ ಓಡಾಡಬೇಕು ಎಂದಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ಸಿಎಂ ಪರ ಸಹಾನಭೂತಿ ವ್ಯಕ್ತಪಡಿಸಿದರು.

ಒಂದೆಡೆ ಕುಳಿತು ಸಮಸ್ಯೆಯನ್ನು ಪರಿಹರಿಸುವುದು ಸಿಎಂ ಅವರ ಕೆಲಸವಾಗಿದೆ. ಪ್ರತಿ ದಿನ ಮೂರು ಹೊತ್ತು ಅವರ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದ ಸಚಿವ ನಿರಾಣಿ ಸಿಎಂ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.