ETV Bharat / state

ಕೋಟ್ಯಂತರ ರೂಪಾಯಿ ವಂಚನೆ ಆರೋಪ: ಚಿಟ್ ಫಂಡ್ ಸಂಸ್ಥೆಯ ಮುಂದೆ ಗ್ರಾಹಕರ ಧರಣಿ

ಗಂಗಾವತಿ ನಗರದ ಸಿಬಿಎಸ್ ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯಲ್ಲಿರುವ ಗವಿಸಿದ್ದೇಶ್ವರ ಚಿಟ್ ಫಂಡ್ ಮುಂದೆ ಪ್ರತಿಭಟನೆ ನಡೆಸಿದ ಗ್ರಾಹಕರು, ಕಳೆದ ಎರಡು ವರ್ಷದಿಂದ ಹಣ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

Gangavathi: Crores of rupees illegality in chit fund business
ಕೋಟ್ಯಂತರ ರೂಪಾಯಿ ಅವ್ಯವಹಾರ: ಚೀಟ್ ಫಂಡ್ ಸಂಸ್ಥೆಯ ಮುಂದೆ ಗ್ರಾಹಕರ ಧರಣಿ
author img

By

Published : Oct 12, 2020, 2:39 PM IST

Updated : Oct 12, 2020, 3:02 PM IST

ಗಂಗಾವತಿ(ಕೊಪ್ಪಳ): ಚೀಟಿ ಹಾಕಿಸಿಕೊಂಡು ಸಕಾಲಕ್ಕೆ ಹಣ ಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ ನೂರಾರು ಗ್ರಾಹಕರು ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.

ಕೋಟ್ಯಂತರ ರೂಪಾಯಿ ವಂಚನೆ ಆರೋಪ: ಚಿಟ್ ಫಂಡ್ ಸಂಸ್ಥೆಯ ಮುಂದೆ ಗ್ರಾಹಕರ ಧರಣಿ

ನಗರದ ಸಿಬಿಎಸ್ ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯಲ್ಲಿರುವ ಗವಿಸಿದ್ದೇಶ್ವರ ಚಿಟ್ ಫಂಡ್ ಮುಂದೆ ಪ್ರತಿಭಟನೆ ನಡೆಸಿದ ಗ್ರಾಹಕರು, ಕಳೆದ ಎರಡು ವರ್ಷದಿಂದ ಹಣ ನೀಡದೆ ವಂಚಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರ ಪತ್ನಿ ಶೋಭಾ ಸೇರಿದಂತೆ ಗಣ್ಯ ವ್ಯಕ್ತಿಗಳ ಪತ್ನಿಯರೇ ನಿರ್ದೇಶಕರಾಗಿದ್ದಾರೆ.

ಹೀಗಾಗಿ ಗ್ರಾಹಕರಿಗೆ ನ್ಯಾಯ ಸಿಗುತ್ತಿಲ್ಲ. ಸಂಸ್ಥೆಯ ಸಿಇಒ ಹಾಗೂ ಮ್ಯಾನೇಜರ್ ಒಬ್ಬರ ಮೇಲೆ ಒಬ್ಬರು ದೋಷಾರೋಪ‌ ಮಾಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ವಂಚನೆಗೊಳಗಾದ ಗ್ರಾಗಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

Last Updated : Oct 12, 2020, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.