ವಿಜಯಪುರ: ವ್ಯಕ್ತಿಯೊಬ್ಬನ ರುಂಡ ಕತ್ತರಿಸಿ ಚೀಲದಲ್ಲಿ ತುಂಬಿ ಭೀಮಾನದಿಯಲ್ಲಿ ಬಿಸಾಕಿರುವ ಭಯಾನಕ ಘಟನೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿ ಸಂಭವಿಸಿದೆ.
ವಿಜಯಪುರ ಜಿಲ್ಲೆ ಚಡವಣ ತಾಲೂಕಿನ ಮರಗೂರು ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ರುಂಡ, ಕೈ ಹಾಗೂ ಕಾಲು ಕತ್ತರಿಸಿ ಪ್ಲಾಸ್ಟಿಕ್ ಕವರ್ನಲ್ಲಿ ಮೂಟೆ ಕಟ್ಟಿ ಯಾರೋ ದುಷ್ಕರ್ಮಿಗಳು ಬೇರೆಡೆಯಿಂದ ಇಲ್ಲಿಗೆ ತಂದು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.
ಸುಮಾರು 30 ವರ್ಷದ ಯುವಕನ ಶವ ಇದಾಗಿದೆ. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.