ETV Bharat / state

ಅಸಹಜ ಸಾವು ನಾಗರಿಕ ಸಮಾಜಕ್ಕೆ ಅವಮಾನ: ಮಾಜಿ ಸ್ಪೀಕರ್ ರಮೇಶ್​ ಕುಮಾರ್​​ - Former Speaker Ramesh Kumar talk on praveen murder case in Vijayapura

ಯಾವುದೇ ಕೊಲೆ ಇರಲಿ ಆಗಬಾರದು. ಕಾಂಗ್ರೆಸ್, ಬಿಜೆಪಿಯಲ್ಲಾಗಲಿ ಯಾವುದೇ ಮುಖಂಡನ ಕೊಲೆಯಾಗಬಾರದು. ಅಸಹಜ ಸಾವು ನಾಗರಿಕ ಸಮಾಜಕ್ಕೆ ಅಪಮಾನವಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್​ ಕುಮಾರ್​​ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್​ ಕುಮಾರ್​​
ಮಾಜಿ ಸ್ಪೀಕರ್ ರಮೇಶ್​ ಕುಮಾರ್​​
author img

By

Published : Jul 27, 2022, 6:34 PM IST

ವಿಜಯಪುರ: ಮಂಗಳೂರಿನಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣ ವಿಚಾರ ನಾನೇನು ಹೋಂ ಮಿನಿಸ್ಟರ್ ಅಲ್ಲ, ಏನಲ್ಲಾ. ನನಗೇನೂ ಮಾಹಿತಿ ಇಲ್ಲ. ಗೊತ್ತಿಲ್ಲದ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟರೆ ಗೌರವ ಸಿಗುತ್ತಾ? ಎಂದು ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದರು.

ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕೊಲೆ ಇರಲಿ ಆಗಬಾರದು. ಕಾಂಗ್ರೆಸ್, ಬಿಜೆಪಿಯಲ್ಲಾಗಲಿ ಯಾವುದೇ ಮುಖಂಡನ ಕೊಲೆಯಾಗಬಾರದು. ಅಸಹಜ ಸಾವು ನಾಗರಿಕ ಸಮಾಜಕ್ಕೆ ಅಪಮಾನವಾಗಿದೆ. ಪ್ರವೀಣ್​ ಸಾವಿಗೆ ದುಃಖ ವ್ಯಕ್ತಪಡಿಸಿದ ರಮೇಶ್​ ಕುಮಾರ್​ ಇದಕ್ಕಿಂದ ಹೆಚ್ಚು ನನಗೆ ಏನು ವಿವರ ಗೊತ್ತಿಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯ ಮಾಡಿದರು.

ಈ ಹಿಂದಿನ ತಮ್ಮ ಹೇಳಿಕೆಗೆ ಮಾಜಿ ಸ್ಪೀಕರ್ ರಮೇಶ್​ ಕುಮಾರ್​​ ಸ್ಪಷ್ಟನೆ

ಯಾವುದೇ ಸಾವು ಆದರೂ ತನಿಖೆ ನಡೆಯಲೇಬೇಕು. ಯಾರೇ ತಪ್ಪಿತಸ್ತರಿದ್ದರೂ ಶಿಕ್ಷೆಯಾಗಬೇಕು. ಹಿಂದೂಗಳ ಟಾರ್ಗೆಟ್ ವಿಚಾರವಾಗಿ ಮಾತನಾಡಿದ ಅವರು, ಹಿಂದೂ, ಮುಸ್ಲಿಂ, ಕ್ರೈಸ್ತರು ಯಾರೇ ಆಗಲಿ, ಜೀವ ಅಲ್ಲವೇ?. ಈ ಕೃತ್ಯ ನಾಗರಿಕ ಸಮಾಜಕ್ಕೆ ಅಪಮಾನ. ಮುಸ್ಲಿಂರಿಂದ ಪ್ರತಿಕಾರ ಕೊಲೆ ವಿಚಾರ. ನನಗೆ ಅದು ಗೊತ್ತಿಲ್ಲ, ಇದು ಗೊತ್ತಿಲ್ಲ. ಗೊತ್ತಿಲ್ಲದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ರಮೇಶ ಕುಮಾರ್ ಹೇಳಿದರು.

ನಾವು ಅವರ ಸಹಾಯಕ್ಕೆ ನಿಲ್ಲಬೇಕು: ಸೊನೀಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡಿ ವಿಚಾರಣೆ ವಿಚಾರ ನಾವು ಅವರ ಸಹಾಯಕ್ಕೆ ನಿಲ್ಲಬೇಕು. 3-4 ತಲೆಮಾರಿಗೆ ಆಗುವಷ್ಟು ಮಾಡಿದ್ದೇವೆ, ಋಣಭಾರ ತೀರಿಸಬೇಕು ಎಂಬ ಹೇಳಿಕೆ ನೀಡಿದ್ದರ ಕುರಿತು ಅವರು ಸ್ಪಷ್ಟನೆ ನೀಡಿದರು.

ನಾನೇನು ಮಾಡಲಿ?: ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ಅವರು ಮಾಧ್ಯಮಗಳಿಂದ ವಿವಾದ ಸೃಷ್ಟಿಯಾದರೆ ನಾನೇನು ಮಾಡಲಿ. ನೀವೂ ಕಟ್ ಅಂಡ್​​ ಪೇಸ್ಟ್ ಮಾಡಿದರೆ ನಾನು ಏನು ಮಾಡಲಿ?. ಗಾಂಧಿ, ನೆಹರು ಬಗ್ಗೆ ಮಾತನಾಡಿದ್ದೇನೆ. ನಾನು ನನ್ನ ಭಾಷಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡಿದ್ದೇನೆ. ಯಾರ್ಯಾರು ಬಲಿದಾನ ಆಗಿದೆ ಅನ್ನೋದು ಹೇಳಿದ್ದೇನೆ ಎಂದರು.

ಇಷ್ಟೆಲ್ಲಾ ಇದ್ದಾಗ ನಾವೆಲ್ಲಾ ಅವರ ( ಗಾಂಧಿ ಕುಟುಂಬ) ಫಲಾನುಭವಿಗಳಿದ್ದೇವೆ. ನಾವೆಲ್ಲಾ ಋಣ ತೀರಿಸಬೇಕು ಎಂದಿದ್ದೇನೆ. ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವ. 6 ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸ್ಪೀಕರ್ ಆಗಿದ್ದೇನೆ. ಸಚಿವನಾಗಿದ್ದೇನೆ. ಇದು ನನಗೂ ಕೂಡಾ ಕೀರ್ತಿ, ಸಂಪಾದನೆ ಅಲ್ವಾ? ಎಂದು ಪ್ರಶ್ನಿಸಿದರು.

ಆಪತ್ತಿನಲ್ಲಿದ್ದಾರೆ ಎಂದು ಹೇಳಿದ್ದೇನೆ: ಸಂಪಾದನೆ ಅಂದರೆ ದುಡ್ಡಾ?, ನಾನು ದುಡ್ಡು ಮಾಡಿದ್ದಾರೆ ಅಂತ ಹೇಳಿದ್ನಾ?. ಅವರು ಇವರು ದುಡ್ಡು ಮಾಡಿದ್ದಾರೆ ಅಂತ ಹೇಳಿದ್ನಾ? ಇದೆಲ್ಲ ಮಾಧ್ಯಮಗಳ ಕೆಲಸ. ನನ್ನ ಕೆಲಸ ಭಾವಾನಾತ್ಮಕವಾಗಿ ನಾವು ಕಾಂಗ್ರೆಸ್ ನಿಂದ ಜೀವನದಲ್ಲಿ ಒಂದು ಸ್ಥಾನಕ್ಕೆ ಬಂದಿದ್ದೇವೆ. ನಾವೆಲ್ಲರೂ ಸೇರಿ ಪಕ್ಷದ ಋಣ ತೀರಿಸಬೇಕು. ಅವರು ಆಪತ್ತಿನಲ್ಲಿದ್ದಾರೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ನಮ್ಮ ಕೆಲಸ ನಾವು ಮಾಡುತ್ತೇವೆ: ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿ ಮುಖಂಡರ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಮೇಶ್​ ಕುಮಾರ್​, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಬಿಜೆಪಿಯವರು ಹೇಳಿದ ಮೇಲೆ ರಾಜಕಾರಣ ಏನಿರುತ್ತೆ? ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿಯವರು ಹೇಳಿದ್ದಾರೆಂಬುದಕ್ಕೆ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಿದ್ದಾರೆಂಬ ಅರ್ಥದಲ್ಲಿ ಮಾತನಾಡಿದ ರಮೇಶ ಕುಮಾರ್​, ಇದರಲ್ಲಿ ರಾಜಕಾರಣ ಏನಿರುತ್ತೆ ಅಥವಾ ಕಾಂಗ್ರೆಸ್ ನವರು ಬಿಜೆಪಿ ಬರುತ್ತೆ ಅಂದರೆ ಅವರ ಕೆಲಸ ಅವರು ಮಾಡುತ್ತಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ. ಜನ ತೀರ್ಮಾನ ಮಾಡುತ್ತಾರೆ ಎಂದರು.

ಇದೆಲ್ಲ ಭ್ರಮೆ: ಕಾಂಗ್ರೆಸ್ ಚೂರು ಚೂರಾಗಲಿದೆ ಎಂಬ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರ್ಯ ಕೊಟ್ಟಿದ್ದೇವೆ. ಎಲ್ಲಾ ಸಿದ್ದರಾಮೋತ್ಸವ ಕಾಂಗ್ರೆಸ್ ಶೋ ವಿಚಾರ. ಅವೆಲ್ಲಾ ಮಾಧ್ಯಮಗಳದ್ದು. ಸಿದ್ದರಾಮೋತ್ಸವ ಮುಂದಿನ ಎಲೆಕ್ಷನ್ ದಿಕ್ಸೂಚಿ ಎಂಬ ಮಾತು ಅದೆಲ್ಲಾ ಮಾಧ್ಯಮಗಳ ಕಲ್ಪನೆ. ನಿಮಗೆ ಫ್ರೀ ಟೈಮ್ ಜಾಸ್ತಿಯಿದೆ. ಇದೆಲ್ಲಾ ಭ್ರಮೆ ಎಂದು ಹೇಳಿದರು.

ಓದಿ: Praveen Murder case.. ತಂದೆಯಿಂದಲೇ ಮಗನ ಚಿತೆಗೆ ಅಗ್ನಿಸ್ಪರ್ಶ, ಕುಟುಂಬಸ್ಥರ ಆಕ್ರಂದನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.