ETV Bharat / state

ವರ್ಷಗಟ್ಟಲೆ ಟಿಕೆಟ್​ ಕೇಳಲು ಆಗಲ್ಲ.. ಮತ್ತೊಮ್ಮೆ ಪರಾಮರ್ಶಿಸಿ ನನಗೆ ಟಿಕೆಟ್​ ಕೊಡಿ: ಪಟ್ಟಣಶೆಟ್ಟಿ

ಮುಂದಿನ ಎರಡು ದಿನದಲ್ಲಿ ವಿಜಯಪುರ ನಗರ ಕ್ಷೇತ್ರದ ಟಿಕೆಟ್​ ಹಂಚಿಕೆ ಬಗ್ಗೆ ಪರಾಮರ್ಶೆ ಮಾಡಬೇಕು. ಬಸನಗೌಡ ಪಾಟೀಲ್​ ಯತ್ನಾಳ್ ಅವರಿಗೆ ಬೇರೆಡೆ ಟಿಕೆಟ್​ ನೀಡಬೇಕು. ನನಗೆ ವಿಜಯಪುರ ಕ್ಷೇತ್ರದ ಟಿಕೆಟ್​ ಕೊಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ್​ ಪಟ್ಟಣಶೆಟ್ಟಿ ಒತ್ತಾಯಿಸಿದ್ದಾರೆ.

former-minister-appasaheb-pattanashetti-reaction-on-vijayapura-city-bjp-ticket
ಮಾಜಿ ಸಚಿವ ಅಪ್ಪಾಸಾಹೇಬ್​ ಪಟ್ಟಣಶೆಟ್ಟಿ
author img

By

Published : Apr 12, 2023, 2:26 PM IST

Updated : Apr 12, 2023, 3:05 PM IST

ಮಾಜಿ ಸಚಿವ ಅಪ್ಪಾಸಾಹೇಬ್​ ಪಟ್ಟಣಶೆಟ್ಟಿ

ವಿಜಯಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಇನ್ನೂ ಎಲ್ಲ ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡಿಲ್ಲ. ಹೀಗಾಗಿ ಟಿಕೆಟ್​ ಹಂಚಿಕೆ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡುವ ಅವಕಾಶ ಇದೆ. ಪಕ್ಷದ ತತ್ವ ಸಿದ್ಧಾಂತ, ಕಾರ್ಯಕರ್ತರ ಹಿತದೃಷ್ಟಿ ಆಧಾರದ ಮೇಲೆ ಪರಾಮರ್ಶೆ ಮಾಡಿ, ನನಗೆ ಅವಕಾಶ ಮಾಡಿಕೊಡಿ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿ, ಮಾಜಿ ಸಚಿವ ಅಪ್ಪಾಸಾಹೇಬ್​ ಪಟ್ಟಣಶೆಟ್ಟಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ವಿಜಯಪುರ ನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೆಸರನ್ನು ಘೋಷಣೆ ಮಾಡಿದೆ. ಇದರಿಂದ ತಮಗೆ ಕ್ಷೇತ್ರದ ಟಿಕೆಟ್ ಕೈತಪ್ಪಿರುವ ಕುರಿತು ಅಪ್ಪಾ ಸಾಹೇಬ ಪಟ್ಟಣಶೆಟ್ಟಿ ಅಸಮಾಧಾನಗೊಂಡಿದ್ದಾರೆ. ಇದರ ನಡುವೆ ಸಮಾಜದವರು, ಬೆಂಬಲಿಗರು ಹಾಗೂ ಕಾರ್ಯಕರ್ತರು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಪಟ್ಟಣಶೆಟ್ಟಿ, ಪಕ್ಷದ ವರಿಷ್ಠ ಇನ್ನೊಮ್ಮೆ ಪರಾಮರ್ಶೆ ಮಾಡಿ ಅವರನ್ನು (ಬಸನಗೌಡ ಪಾಟೀಲ್​ ಯತ್ನಾಳ್) ಶಿಫ್ಟ್​ ಮಾಡಿ. ನನಗೆ ಅವಕಾಶ ಮಾಡಿಕೊಡಿ. ವರ್ಷಗಟ್ಟಲೆ ಟಿಕೆಟ್​ ಕಳೆದುಕೊಂಡು ಬರಲು ಆಗುವುದಿಲ್ಲ. ಬೆಂಗಳೂರಿಗೆ ಹೋಗಿ ಟಿಕೆಟ್​ ಕೇಳುವ ವ್ಯಕ್ತಿ ನಾನಲ್ಲ. ಕ್ಷೇತ್ರದಲ್ಲಿ ಪಕ್ಷದ ಹಂತದಲ್ಲಿ ನಡೆದ ಮತದಾನದಲ್ಲಿ ನನಗೆ ಹೆಚ್ಚಿನ ಬೆಂಬಲ ಸಿಕ್ಕಿತ್ತು ಎಂದರು.

ಇದರ ಆಧಾರದ ಮೇಲೆ ನಾನು ರಾಜ್ಯ ನಾಯಕರ ಭೇಟಿ ಮಾಡಿ ನನಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೆ. ನಾನು ಐದು ವರ್ಷ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಕಾರ್ಯಕರ್ತರನ್ನು ಗುರುತಿಸುತ್ತಾರೆ ಎಂಬ ವಿಶ್ವಾಸ ಇತ್ತು. ಕೈ ಹಿಡಿಯುತ್ತಾರೆ ಎಂಬ ಭಾವನೆ ಇತ್ತು. ನಾನು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ನನಗೆ ಇದೇ ಮತ ಕ್ಷೇತ್ರದಲ್ಲಿ ಟಿಕೆಟ್​ ಕೊಡಬೇಕೆಂಬ ಹಠ ಇದೆ ಎಂದು ಹೇಳಿದರು.

ನಗರ ಕ್ಷೇತ್ರದ ಟಿಕೆಟ್ ಬೇಡಿಕೆಯನ್ನು ತಡವಾಗಿ ವರಿಷ್ಠರಿಗೆ ಕೇಳಿದ್ದೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್ ಕೇಳುವಲ್ಲಿ ತಡವಾಗಿಲ್ಲ. ಐದು ವರ್ಷದ ಮುಂಚೆ ಬೆಂಗಳೂರಿನಲ್ಲಿ ಠಿಕಾಣಿ ಹೂಡಬೇಕಾಗಿತ್ತಾ?, ತಾವು ನಿರಂತರವಾಗಿ ಪಕ್ಷ ಸಂಘಟನೆ ತೊಡಗಿಕೊಂಡಿದ್ದೆ. ಚುನಾವಣೆ ಘೋಷಣೆಯಾದ ಮೇಲೆ ಟಿಕೆಟ್ ಬೇಡಿಕೆ ಇಟ್ಟಿದ್ದೇನೆ ಹೊರತು ಬೇರೆಯವರಂತೆ ಬೆಂಗಳೂರಿನಲ್ಲಿದ್ದು ಕೆಲಸ ಮಾಡಿಲ್ಲ ಎಂದೂ ಅಸಮಾಧಾನ ಹೊರಹಾಕಿದರು.

ಬೇರೆ ಪಕ್ಷಕ್ಕೆ ಹೋಗಲ್ಲ: ಇದೇ ವೇಳೆ, ಜೆಡಿಎಸ್​ ಪಕ್ಷಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಟ್ಟಣಶೆಟ್ಟಿ, ನಾನು ಯಾವುದೇ ಪಕ್ಷಕ್ಕೂ ಸೇರಲ್ಲ. ನನ್ನ ಕಾರ್ಯಕರ್ತರು ನಾನು ಇಲ್ಲೇ ಇದ್ದುಕೊಂಡು ಕೆಲಸ ಮಾಡುತ್ತೇನೆ. 30 ವರ್ಷ ಒಂದೇ ಪಕ್ಷದಲ್ಲಿದ್ದೇನೆ. ಅಧಿಕಾರಕ್ಕೆ ಪಕ್ಷದ ತ್ಯಜಿಸಬೇಕೆಂಬ ಮನಸು ಕೂಡ ಇಲ್ಲ. ಆದರೆ, ಎರಡು ದಿನದಲ್ಲಿ ಟಿಕೆಟ್​ ವಿಷಯದಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಯತ್ನಾಳ್​ ಬೇರೆಡೆ ಸ್ಪರ್ಧೆ ಮಾಡಲಿ: ತಮ್ಮ ನಾಯಕರು ಘೋಷಣೆ ಮಾಡಿರುವ ಟಿಕೆಟ್​ ಹಂಚಿಕೆ ಪ್ರತಿಕ್ರಿಯೆ ಸರಿಯಲ್ಲ. ಹೀಗಾಗಿ ಮುಂದಿನ ಎರಡು ದಿನದಲ್ಲಿ ಇದನ್ನು ಪರಾಮರ್ಶೆ ಮಾಡಬೇಕು. ಚಾಮರಾಜನಗರ, ಹುಬ್ಬಳ್ಳಿ - ಧಾರವಾಡ, ಬೆಳಗಾವಿ, ಬೀದರ್​, ಗುಲಬರ್ಗಾ ಬಹಳ ಕಡೆ ಕ್ಷೇತ್ರಗಳು ಇವೆ. ಅವರಿಗೆ (ಯತ್ನಾಳ್) ಬೇಕಾದರೆ ಅಲ್ಲಿ ಟಿಕೆಟ್​ ಕೊಡಲಿ. ನನಗೆ ವಿಜಯಪುರ ಕ್ಷೇತ್ರದ ಟಿಕೆಟ್​ ಬೇಕು. ಯಾಕೆಂದರೆ, 30 ವರ್ಷದ ಕ್ಷೇತ್ರ ಬಿಟ್ಟು ನಾನು ಹೋಗಿಲ್ಲ ಎಂದು ಹೇಳಿದರು.

ಅವರು (ಯತ್ನಾಳ್) ಕ್ಷೇತ್ರ ಬಿಟ್ಟು ದೇವರ ಹಿಪ್ಪರಗಿಗೆ ಹೋಗಿದ್ದರು. ಎಂಎಲ್​ಸಿ ಚುನಾವಣೆಗೆ ನಿಂತಿದ್ದರು. ನಾನು ಅಂತಹ ಪ್ರಯತ್ನ ಮಾಡಲು ಹೋಗಿಲ್ಲ. ವಿಜಯಪುರ ನಗರದ ಮತದಾರರೇ ನನ್ನ ದೇವರು. ಎರಡು ದಿನಗಳ ಬಳಿಕ ಕಾರ್ಯಕರ್ತರು ಏನು ಹೇಳುತ್ತಾರೆ. ಅದರ ಪ್ರಕಾರ ನಾನು ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕೈ ತಪ್ಪಿದ ಬಿಜೆಪಿ ಟಿಕೆಟ್ - ರಾಜೀನಾಮೆಗೆ ಸವದಿ ನಿರ್ಧಾರ.. ನಾಳೆಯೇ ಅಂತಿಮ ತೀರ್ಮಾನ

Last Updated : Apr 12, 2023, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.