ಮುದ್ದೇಬಿಹಾಳ: ಹೊರ ರಾಜ್ಯಗಳಿಂದ ತವರಿಗೆ ಮರಳಿ ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಇರುವ ಕಾರ್ಮಿಕರಿಗೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಪತ್ನಿ ಮಹಾದೇವಿ ಪಾಟೀಲ್ ನಡಹಳ್ಳಿ ಹೋಳಿಗೆ ಮತ್ತು ಸೀಕರಣೆ ಊಟ ಬಡಿಸಿದರು.
ತಾಲೂಕಿನ ಢವಳಗಿ ಗ್ರಾಮದ ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆಯ ಕ್ವಾರಂಟೈನ್‌ಲ್ಲಿರುವ ಮಹಾರಾಷ್ಟ್ರ, ಕೇರಳದಿಂದ ಬಂದಿರುವ ಕಾರ್ಮಿಕರಿಗೆ ಸಿಹಿಯೂಟ ಬಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಾರಂಟೈನ್ ಅವಧಿ ಮುಗಿಸಿ ಊರಿಗೆ ವಾಪಾಸ್ ಆಗುವ ಕಾರ್ಮಿಕರ ಮೊಗದಲ್ಲಿ ಖುಷಿ ಕಂಡು ಬರುತ್ತಿದೆ. ಹೀಗಾಗಿ, ಕಾರ್ಮಿಕರಿಗೆ ಸಿಹಿ ಊಟ ನೀಡುದ್ದೇವೆ. ಕಾರ್ಮಿಕರಿಗೆ ಯಾವುದಕ್ಕೂ ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಈ ಕಾರ್ಯ ಕೈಗೊಂಡಿದ್ದೇವೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಓ ಶಶಿಕಾಂತ ಶಿವಪೂರೆ, ಢವಳಗಿ ಗ್ರಾಮ ಪಂಚಾಯಿತಿ ಎಸ್‌ಡಿಎ ಎಂ.ಕೆ. ಗುಡಿಮನಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರೆಡ್ಡಿ, ಸಂಗಮೇಶ ಹುಂಡೇಕಾರ, ಅಶೋಕ ರಾಠೋಡ ಸೇರಿದಂತೆ ಇತರರು ಇದ್ದರು.