ETV Bharat / state

ಪ್ರವಾಹದ ಮುನ್ನೆಚ್ಚರಿಕೆಗೂ ಜಗ್ಗದೇ ಮೀನುಗಾರಿಕೆ: ಅಧಿಕಾರಿಗಳಿಂದ ಜಾಣಕುರುಡುತನ ಪ್ರದರ್ಶನ? - ವಿಜಯಪುರ ಜಿಲ್ಲಾಡಳಿತ

ವರುಣನ ಅರ್ಭಟಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಇತ್ತ ನಾರಾಯಣಪೂರ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೃಷ್ಣೆಯ ಮೀನುಗಾರಿಕೆ ಸ್ಥಗಿತಗೊಳಿಸಿ ನದಿಗೆ ಇಳಿಯದಂತೆ ಎಚ್ಚರಿಕೆ ಕೊಟ್ಟಿದೆ. ಆದರೆ ಅದಕ್ಕೆ ಜಗ್ಗದ ಮೀನುಗಾರರು ನಿತ್ಯವೂ ತಮ್ಮ ಜೀವ ಲೆಕ್ಕಿಸದೇ ಬಲೆ ಬೀಸಿ ಮೀನುಗಾರಿಕೆಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

fishing continued in krishna river bangk of Muddebihala
ಅಧಿಕಾರಿಗಳ ಜಾಣ ಮೌನ: ಪ್ರವಾಹದ ಮುನ್ನೆಚ್ಚರಿಗೂ ಜಗ್ಗದೇ ಮೀನುಗಾರಿಕೆ ಚಟುವಟಿಕೆ
author img

By

Published : Jul 15, 2020, 3:22 PM IST

ಮುದ್ದೇಬಿಹಾಳ: ಜಿಲ್ಲಾಡಳಿತ ಕೃಷ್ಣಾ ನದಿ ತೀರದಲ್ಲಿ ಬರುವ ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದರೂ ಮೀನುಗಾರರು ಅದನ್ನು ಲೆಕ್ಕಿಸದೆ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಹಾಗೂ ಸರ್ಕಾರದ ಆದೇಶಕ್ಕೆ ಇವರು ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

fishing continued in krishna river bangk of Muddebihala
ಪ್ರವಾಹದ ಮುನ್ನೆಚ್ಚರಿಕೆಗೂ ಜಗ್ಗದೇ ಮೀನುಗಾರಿಕೆ ಚಟುವಟಿಕೆ

ವರುಣನ ಅರ್ಭಟಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಇತ್ತ ನಾರಾಯಣಪೂರ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೃಷ್ಣೆಯ ಮೀನುಗಾರಿಕೆ ಸ್ಥಗಿತಗೊಳಿಸಿ ನದಿಗೆ ಇಳಿಯದಂತೆ ಎಚ್ಚರಿಕೆ ಕೊಟ್ಟಿದೆ. ಆದರೆ ಅದಕ್ಕೆ ಜಗ್ಗದ ಮೀನುಗಾರರು ನಿತ್ಯವೂ ತಮ್ಮ ಜೀವ ಲೆಕ್ಕಿಸದೇ ಬಲೆ ಬೀಸಿ ಮೀನುಗಾರಿಕೆಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ತಾಲೂಕಿನ ನಾಲತವಾಡ ಸಮೀಪದಲ್ಲಿ ಬರುವ ಕೃಷ್ಣಾ ತೀರದಲ್ಲಿ ಸುಮಾರು ವರ್ಷಗಳಿಂದಲೂ ಮೀನುಗಾರಿಕೆಯಲ್ಲಿ ತೊಡಗಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮೀನುಗಾರರ ನೂರಕ್ಕೂ ಹೆಚ್ಚು ಕುಟುಂಬಗಳು ನದಿ ತೀರದಲ್ಲೇ ವಾಸಿಸುತ್ತಿವೆ. ಇತ್ತೀಚಿನ ವರುಣನ ಅರ್ಭಟಕ್ಕೆ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರುತ್ತಲೇ ಇದ್ದು, ಸುಮಾರು 40 ಸಾವಿರ ಕ್ಯೂಸೆಕ್ ನೀರು ನಿತ್ಯ ಆಲಮಟ್ಟಿ ಜಲಾಶಯದಿಂದ ಹರಿಬಿಡಲಾಗುತ್ತಿದೆ.

ಅಪಾಯ ಕಟ್ಟಿಟ್ಟ ಬುತ್ತಿ:

ನದಿ ನೀರು ಹೆಚ್ಚಿನ ಮಟ್ಟದಲ್ಲಿ ಹರಿಯುತ್ತಿದ್ದು, ನಿತ್ಯವೂ ಮೀನುಗಾರರು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ವೃದ್ಧರು, ಯುವಕರು ಮೀನು ಬಲೆ ಬೀಸಿ ಮೀನುಮರಿಗಳ ಬೇಟೆಯಲ್ಲಿ ತೊಡಗಿದ್ದು, ಜೀವದ ಹಂಗು ತೊರೆದು ಲಾಭದ ಹಿಂದೆ ಬಿದ್ದಿದ್ದಾರೆ.

ಮೀನು ಮರಿಗಳ ಮಾರಣಹೋಮ:

ಮಳೆ ಸುರಿಯುತ್ತಿದ್ದು ಸಣ್ಣ ಸಣ್ಣ ಮೀನುಗಳು ನದಿ ಸೇರುತ್ತಿವೆ. ಸಣ್ಣ ಮೀನುಗಳನ್ನು ಹಿಡಿಯಬಾರದು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿರುವ ಮೀನುಗಾರರು ಮೀನುಮರಿಗಳ ಮಾರಣಹೋಮದಲ್ಲಿ ತೊಡಗಿದ್ದಾರೆ.

ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮಾತ್ರ ಬಾಯಿ ಮಾತಿನ ಎಚ್ಚರಿಕೆ ನೀಡಿದ್ದು, ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.