ವಿಜಯಪುರ : ಆಕಸ್ಮಿಕವಾಗಿ ಬೇಕರಿಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ಮಾಲೀಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಮಾಧವರಾವ ಚೌಧರಿ (35) ಮೃತ್ರ ದುರ್ದೈವಿ.
ಮಾಧವರಾವ ಚೌಧರಿ, ನಗರದಲ್ಲಿ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ರಾತ್ರಿ ಬೇಕರಿಯಲ್ಲಿ ಪೂಜೆ ಮಾಡಿ ದೀಪ ಹಚ್ಚಿಟ್ಟು ತಾನೂ ಅಲ್ಲಿಯೇ ಮಲಗಿದ್ದು ಬೆಂಕಿ ಅವಘಡ ಸಂಭವಿಸಿದೆ.
ಬೇಕರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ರೋಲಿಂಗ್ ಶಟರ್ ಮುರಿದು ಮಾಲೀಕರನ್ನು ಹೊರಗೆ ಕರೆದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.