ವಿಜಯಪುರ: ಮಾಸ್ಕ್ ಧರಿಸದೆ ರಸ್ತೆಗಳಿಯುವ ಜನರಿಗೆ ಮಾಹಾನಗರ ಪಾಲಿಕೆ ಸಿಬ್ಬಂದಿ ದಂಡ ವಿಧಿಸಿದಾಗ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಧಿಕ್ಕಾರ ಕೂಗಿ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಸಿದ್ದೇಶ್ವರ ಮಂದಿರ ರಸ್ತೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಜಿಲ್ಲಾಡಳಿತದ ನಿರ್ದೇಶನದನ್ವಯವಾಗಿ ಮಾಸ್ಕ್ ಧರಿಸದೆ ಓಡಾಟ ನಡೆಸುವ ಜನರಿಗೆ 1000 ರೂ. ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ದಂಡ ಹಾಕುವ ನೆಪದಲ್ಲಿ ಪಾಲಿಕೆ ಆಧಿಕಾರಿಗಳು ಸಾರ್ವಜನಿಕರ ಬೈಕ್ ಕೀ ಕಿತ್ತುಕೊಂಡಿದ್ದಾರೆ ಎಂದು ಮಹಾನಗರ ಪಾಲಿಕೆ ಆಧಿಕಾರಿಗಳ ವಿರುದ್ಧ ಸಾರ್ವಜನಿಕರು ಘೋಷಣೆ ಕೂಗಿದರು. ಈ ವೇಳೆ ಸಿಬ್ಬಂದಿ ಜೊತೆಗೆ ಕೆಲ ಕಾಲ ವಾಗ್ವಾದ ಕೂಡ ನಡೆಯಿತು.
ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ಹಾಕುವ ಮೊದಲು ನಗರದಲ್ಲಿ ಪ್ರಚಾರ ಮಾಡಿ ನಂತರ ಕಾನೂನು ಚೌಕಟ್ಟಿನಲ್ಲಿ ದಂಡ ವಿಧಿಸುವಂತೆ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಬಳಿಕೆ ಘಟನಾ ಸ್ಥಳಕ್ಕೆ ಗಾಂಧಿ ಚೌಕ್ ಸಂಚಾರಿ ಠಾಣೆ ಪಿಎಸ್‌ಐ ಆರೀಫ್ ಬಂದು ಪರಿಸ್ಥಿತಿ ತಿಳಿಗೊಳಿಸಿದರು.