ETV Bharat / state

ವಿಜಯಪುರದಲ್ಲೊಂದು ಫೈಬರ್ ಗಣಪ.. 20 ವರ್ಷ ಇದೇ ಮೂರ್ತಿಗೆ ಪೂಜೆ - ಛತ್ರಪತಿ ಶಿವಾಜಿ ಮಹಾರಾಜ ವೃತ್ತ

ವಿಜಯಪುರದ ಗಣೇಶೋತ್ಸವದಲ್ಲಿ ಫೈಬರ್ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಉತ್ಸವದ ಬಳಿಕ ಈ ಫೈಬರ್ ಮೂರ್ತಿಯನ್ನು ಮುಂದಿನ ವರ್ಷದ ಉತ್ಸವಕ್ಕೆ ತೆಗೆದಿರಿಸಲಾಗುತ್ತದೆ.

eco-friendly-fibre-ganesh-idol-at-vijaypur
ವಿಜಯಪುರದಲ್ಲೊಂದು ಫೈಬರ್ ಗಣಪ..20 ವರ್ಷ ಒಂದೇ ಮೂರ್ತಿಗೆ ಪೂಜೆ
author img

By

Published : Sep 4, 2022, 6:49 PM IST

ವಿಜಯಪುರ : ನಗರದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಗಣೇಶ ಉತ್ಸವ ಮಂಡಳಿಗಳ ಮಹಾ ಮಂಡಳವು ಫೈಬರ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಫೈಬರ್ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

ಪಿಓಪಿಯಿಂದ ಮಾಡುವ ಗಣೇಶನ ಮೂರ್ತಿಯಂತೆಯೇ ಇರುವ ಈ ಫೈಬರ್ ಗಣೇಶನ ಮೂರ್ತಿಯನ್ನು ಮಹಾರಾಷ್ಟ್ರದಿಂದ ತರಲಾಗಿದೆ. ಕಳೆದ ಐದು ವರ್ಷಗಳಿಂದ ಈ ಫೈಬರ್ ಗಣೇಶನನ್ನು ಇಲ್ಲಿ ಪೂಜಿಸಲಾಗುತ್ತಿದೆ. ಈ ಫೈಬರ್ ಗಣೇಶನ ಮೂರ್ತಿಯ ಎದುರಿಗೆ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಒಂಬತ್ತು ದಿನಗಳ ಉತ್ಸವದ ಬಳಿಕ ಮಣ್ಣಿನ ಗಣಪತಿಯನ್ನು ನಿಮಜ್ಜನ ಮಾಡಲಾಗುತ್ತದೆ. ಜೊತೆಗೆ ಈ ಫೈಬರ್ ಗಣೇಶನನ್ನು ಸುರಕ್ಷಿತವಾಗಿ ಮುಂದಿನ ವರ್ಷದ ಉತ್ಸವಕ್ಕೆ ತೆಗೆದಿರಿಸಲಾಗುತ್ತದೆ.

ವಿಜಯಪುರದಲ್ಲೊಂದು ಫೈಬರ್ ಗಣಪ..20 ವರ್ಷ ಇದೇ ಮೂರ್ತಿಗೆ ಪೂಜೆ

ಈ ರೀತಿಯ ಫೈಬರ್ ಮೂರ್ತಿಗಳು ಸುಮಾರು ಇಪ್ಪತ್ತು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಇಡೀ ರಾಜ್ಯದಲ್ಲಿಯೇ ಇದು ಮೊದಲ ಪ್ರಯೋಗವಾಗಿದ್ದು, ಇದನ್ನು ಕಂಡ ನಗರದ ಇತರ ಪ್ರಮುಖ ಗಣೇಶ ಮಂಡಳಿಗಳು ಫೈಬರ್ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆಯಂತೆ. ಗಣೇಶೋತ್ಸವ ಬಳಿಕ ಈ ಫೈಬರ್ ಗಣೇಶನಿಗೆ ಸಂಕಷ್ಟಿ ಸಂದರ್ಭದಲ್ಲಿ ಪೂಜೆ ನಡೆಯುತ್ತದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳುತ್ತಾರೆ.

ಇದನ್ನೂ ಓದಿ : ಹಿಂದೂ ಮುಸ್ಲಿಂರು ಸೇರಿ ಗಣೇಶೋತ್ಸವ ಆಚರಣೆ.. ಮಾದರಿಯಾದ ಕೊಟಗೊಂಡಹುಣಸಿ ಗ್ರಾಮಸ್ಥರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.