ETV Bharat / state

ತೊಗರಿ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಅನ್ನದಾತರ ಮನವಿ

ಕೇಂದ್ರ ಸರ್ಕಾರವೇ ₹6,300 ಬೆಂಬಲ ಬೆಲೆ ಕೊಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಿತ ಕನಿಷ್ಠ 500 ರೂ. ಆದರೂ ಬೆಂಬಲ ಬೆಲೆ ಸೇರಿಸಿ ಕೊಡಬೇಕು ಎನ್ನುವುದು ರೈತರ ಬೇಡಿಕೆ. ಇದಕ್ಕೆ ಜಿಲ್ಲಾಡಳಿತ ಸಹ ಸಕಾರಾತ್ಮಕ ವಾಗಿ ಸ್ಪಂದಿಸಿದ್ದು, ಸರ್ಕಾರದ ಗಮನಕ್ಕೆ ತರಲು ಮುಂದಾಗಿದೆ..

farmers
ಬೆಂಬಲ ಬೆಲೆ ಹೆಚ್ಚಿಸುವಂತೆ ಅನ್ನದಾತರ ಮನವಿ
author img

By

Published : Dec 26, 2021, 2:02 PM IST

ವಿಜಯಪುರ : ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅನ್ನದಾತ ತೊಗರಿ ಬೆಳೆ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾನೆ. ಆದರೆ, ಈ‌ ಬಾರಿ ಅನಾವೃಷ್ಠಿ ಹಾಗೂ ಅತಿವೃಷ್ಠಿ ಜತೆಗೆ ಮಂಜು ಕವಿದ ವಾತಾವರಣದಿಂದ ತೊಗರಿ ಬೆಳೆ ಹಾಳಾಗಿದೆ. ಅಳಿದುಳಿದ ಬೆಳೆಯನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲು ಹಿಂದೇಟು ಹಾಕುತ್ತಿರುವ ಕಾರಣ ಅನ್ನದಾತ ಕಂಗಾಲಾಗಿದ್ದಾನೆ.

ಸರ್ಕಾರ ಕೇವಲ 7 ರಿಂದ 15 ಕ್ವಿಂಟಾಲ್ ತೊಗರಿ ಖರೀದಿ ಮಾಡಲು ಮುಂದಾಗಿದೆ. ಉಳಿದ ತೊಗರಿ ಬೆಳೆ ಏನು ಮಾಡಬೇಕು ಎನ್ನುವುದೇ ಚಿಂತೆಗೀಡಾಗಿದೆ. ಜಿಲ್ಲೆಯಲ್ಲಿ 4.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ.

6300 ರೂ. ಬೆಂಬಲ ಬೆಲೆ ನೀಡಿ ಒಬ್ಬ ರೈತನಿಂದ15ಕ್ವಿಂಟಾಲ್ ತೊಗರಿ ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಅನ್ನದಾತರು ಕನಿಷ್ಠ 20 ಕ್ವಿಂಟಾಲ್ ತೊಗರಿಯನ್ನಾದರೂ ಖರೀದಿ ಮಾಡಬೇಕು. ಬೆಂಬಲ ಬೆಲೆ ಸಹ ಹೆಚ್ಚಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಬೆಂಬಲ ಬೆಲೆ ಹೆಚ್ಚಿಸುವಂತೆ ಅನ್ನದಾತರ ಮನವಿ

ತೊಗರಿ ಬೆಳೆ ಬೆಳೆಯಲು ಒಂದು ಎಕರೆಗೆ ಏನಿಲ್ಲ ಅಂದ್ರು 10 ಸಾವಿರ ರೂ. ಖರ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡಿಮೆಯೆಂದ್ರು 8 ಸಾವಿರ ರೂ. ಬೆಂಬಲ ಬೆಲೆ ನಿಗದಿ ಪಡಿಸಬೇಕು.

ಜೊತೆಗೆ ಕಳೆದ ಬಾರಿ ಪ್ರತಿಯೊಬ್ಬ ರೈತನಿಂದ 20 ಕ್ವಿಂಟಾಲ್ ತೊಗರಿ ಖರೀದಿಸಿದ್ದ ಸರ್ಕಾರ, ಈ ಬಾರಿ 15 ಕ್ವಿಂಟಾಲ್‌ಗೆ ಸೀಮಿತಗೊಳಿಸಿದರೆ ಹೇಗೆ ಎಂಬುದು ರೈತರ ಆಕ್ರೋಶ.

ಕೇಂದ್ರ ಸರ್ಕಾರವೇ ₹6,300 ಬೆಂಬಲ ಬೆಲೆ ಕೊಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಿತ ಕನಿಷ್ಠ 500 ರೂ. ಆದರೂ ಬೆಂಬಲ ಬೆಲೆ ಸೇರಿಸಿ ಕೊಡಬೇಕು ಎನ್ನುವುದು ರೈತರ ಬೇಡಿಕೆ. ಇದಕ್ಕೆ ಜಿಲ್ಲಾಡಳಿತ ಸಹ ಸಕಾರಾತ್ಮಕ ವಾಗಿ ಸ್ಪಂದಿಸಿದ್ದು, ಸರ್ಕಾರದ ಗಮನಕ್ಕೆ ತರಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.