ETV Bharat / state

ಜಮೀನಿಗೆ ತೆರಳಲು ದಾರಿಗೆ ವ್ಯವಸ್ಥೆ ಮಾಡಿಕೊಡಿ:  ಜಿಲ್ಲಾಧಿಕಾರಿಗೆ ರೈತರ ಆಗ್ರಹ - vijayapura farmers protest

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ದಾರಿ ಸಮಸ್ಯೆ ಎದುರಾಗಿದ್ದು, ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ರೈತ ಸಂಘಟನೆ ಡಿಸಿಗೆ ಮನವಿ ಮಾಡಿತು.

Farmer urges District Collector to make way for field
ದಾರಿ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ರೈತರ ಆಗ್ರಹ
author img

By

Published : Aug 11, 2020, 3:06 PM IST

ವಿಜಯಪುರ: ಕೃಷಿ ಚಟುವಟಿಕೆಗಳನ್ನು ನಡೆಸಲು ಗದ್ದೆಗಳಿಗೆ ತೆರಳಲು ದಾರಿ ಮಾಡಿ‌ಕೊಡುವಂತೆ ಅಖಂಡ ಕರ್ನಾಟಕ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಜಮೀನಿಗೆ ತೆರಳಲು ದಾರಿ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ರೈತರ ಆಗ್ರಹ

ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘಟನೆ ಮುಖಂಡರು, ಜಿಲ್ಲೆಯಲ್ಲಿ ರೈತರು ತಮ್ಮ‌ ಜಮೀನುಗಳಿಗೆ ಹೋಗಲು ದಾರಿಯಿಲ್ಲದೇ ಪರದಾಟ ನಡೆಸುವಂತಾಗಿದೆ.‌ ಕೃಷಿ ಚಟುವಟಿಕೆ ನಡೆಸಲು ಅನಾನುಕೂಲ ಉಂಟಾಗಿದ್ದು, ಹಲವು ಬಾರಿ ಅಧಿಕಾರಿಗಳಿಗೆ ದಾರಿ ಸಮಸ್ಯೆ ಕುರಿತಾಗಿ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಧುನಿಕ ಯಂತ್ರೋಪಕರಣಗಳನ್ನ ಜಮೀನುಗಳಿಗೆ ತೆಗೆದುಕೊಂಡು ಹೋಗಲಾಗದೇ ಸಂಕಷ್ಟ ಎದುರಿಸುವಂತಾಗಿದೆ ಎಂದು ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಅಲ್ಲದೇ, ತಮ್ಮ ಜಮೀನುಗಳಿಗೆ ಹೋಗಲು ಕೆಲವು ರೈತರು ತಕರಾರು ಮಾಡುತ್ತಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ವಾಸ್ತವ ಸ್ಥಿತಿ ಕುರಿತು ಸರ್ವೇ ಮಾಡುವಂತೆ ಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.