ETV Bharat / state

ಸಾರ್ವಜನಿಕರಿಗಾಗಿ ಮುದ್ದೇಬಿಹಾಳ ಬಳಿ ತಮ್ಮ ಸ್ವಂತ ಹಣದಲ್ಲಿ ಬೋರೆವೆಲ್‌ ಕೊರೆಸಿದ ಆಂಧ್ರಪ್ರದೇಶದ ರೈತ - ಈಟಿವಿ ಭಾರತ್​ ಕನ್ನಡ ನ್ಯೂಸ್​

ವಿಜಯಪುರದ ನಾಲತವಾಡ ಪಟ್ಟಣಕ್ಕೆ ಬೇಸಾಯ ಮಾಡಲು ಬಂದ ರೈತರೊಬ್ಬರು ಸಾರ್ವಜನಿಕರ ಅನುಕೂಲಕ್ಕಾಗಿ ಸ್ವಂತ ಹಣದಲ್ಲಿ ಬೋರ್​ವೆಲ್ ಕೊರೆಯಿಸಿದ್ದಾರೆ.

ಬೋರೆವೆಲ್‌ ಕೊರೆಸಿದ ರೈತ
ಬೋರೆವೆಲ್‌ ಕೊರೆಸಿದ ರೈತ
author img

By

Published : May 27, 2023, 6:37 AM IST

ಸಾರ್ವಜನಿಕರಿಗಾಗಿ ಸ್ವಂತ ಖರ್ಚಿನಲ್ಲಿ ಬೋರೆವೆಲ್‌ ಕೊರೆಸಿದ ರೈತ

ವಿಜಯಪುರ: ನೆರೆ ರಾಜ್ಯಆಂಧ್ರಪ್ರದೇಶದಿಂದ ವಿಜಯಪುರದ ನಾಲತವಾಡಕ್ಕೆ ಜೀವನೋಪಾಯಕ್ಕೆ ಬಂದಿರುವ ರೈತರೊಬ್ಬರು ತಮ್ಮ ಸ್ವಂತ ಹಣದಲ್ಲಿ ಜನರಿಗಾಗಿ ಬೋರ್​ವೆಲ್ ಕೊರೆಯಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆಂಜನೇಯ ಭಕ್ತರಾಗಿರುವ ಇವರು ಜನರಿಗೆ ಅನುಕೂಲ ಆಗಲೇಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಬಲದಿನ್ನಿ ರಸ್ತೆಯಲ್ಲಿ ಇರುವ ಬಯಲು ಹನುಮಾನ್​ ದೇವಸ್ಥಾನದ ಮುಂದೆ ತನ್ನ ಸ್ವಂತ ಖರ್ಚಿನಲ್ಲಿ ಬೋರವೆಲ್ ಕೊರೆಯಿಸಿದ್ದಾರೆ.

ಮೂಲತಃ ಆಂಧ್ರದ ಅಲವಲಪಾಡು ಪಟ್ಟಣದ ನಿವಾಸಿಯಾಗಿರುವ ಜಿ.ವೆಂಕಟೇಶ್ವರಾವ ಅವರು ಕರ್ನಾಟಕದ ನಾಲತವಾಡ ಪಟ್ಟಣಕ್ಕೆ ಬೇಸಾಯ ಮಾಡಲು ಬಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ಬೇರೆ ಬೇರೆ ರೈತರ ಜಮೀನುಗಳನ್ನು ಪಾಲುದಾರಿಕೆಯಂತೆ ಪಡೆದು ಅದರಲ್ಲಿ ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವ್ಯವಸಾಯ ಮಾಡಿ ಇತರೇ ಬೆಳೆಗಳನ್ನು ಬೆಳೆದು ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೇ ಬಲದಿನ್ನಿ ರಸ್ತೆಯ ಪಕ್ಕದಲ್ಲಿರುವ ಹನುಮಾನ್​ ದೇವರ ಆಶೀರ್ವಾದದಿಂದ ದಂಪತಿಗಳಿಗೆ ಆರೋಗ್ಯ, ಆಯುಷ್ಯ ಸೇರಿದಂತೆ ಸಂಪತ್ತು ಹೆಚ್ಚಾಗಿದೆಯಂತೆ. ಹೀಗಾಗಿ ಇದೇ ದೇವಸ್ಥಾನದ ಮುಂದೆ ಬೋರ್‌ವೆಲ್ ಹಾಕಿಸಿ ಸಾರ್ವಜನಿಕರಿ ಅನುಕೂಲ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ : ಯೋಧನ ಮುಖಕ್ಕೆ ಜೀವನ ಜ್ಯೋತಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ: ಮರು ಜೀವ ನೀಡಿದ ವೈದ್ಯರು

ನಾಲತವಾಡ ಹಾಗೂ ಬಲ ದಿನ್ನಿಯ ರಸ್ತೆಯ ಮಾರ್ಗದಲ್ಲಿ ಐದಾರು ಕಿಲೋಮೀಟರ್ ವರೆಗೂ ಎಲ್ಲಿಯೂ ನೀರಿನ ಅನುಕೂಲ ಇರಲಿಲ್ಲ. ಸಾರ್ವಜನಿಕಕರು, ರೈತರು, ಜಾನುವಾರುಗಳು ನೀರಿಲ್ಲದೆ ಬೇಸಿಗೆಯಲ್ಲಿ ಪರದಾಡುವಂತಾಗಿತ್ತು. ಇದನ್ನು ಅರಿತ ಜಿ ವೆಂಕಟೇಶರಾವ್ ಹಾಗೂ ಅವರ ಪತ್ನಿ ತುಳಸಮ್ಮ ದಂಪತಿಗಳು ಬೋರವೆಲ್ ಕೊರೆಯುವ ನಿರ್ಧಾರ ಮಾಡಿದ್ದು, ಈ ಭಾಗದ ರೈತರಿಗೆ ಹಾಗೂ ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ ಅನುಕೂಲ ಕಲ್ಪಿಸಿದ್ದಾರೆ.

ಇದನ್ನೂ ಓದಿ : ಅಧಿಕಾರಿಗಳ ಕರ್ತವ್ಯ ಲೋಪ ಸಹಿಸಲ್ಲ, ಜನರ ಕೆಲಸಕ್ಕೆ ಲಂಚ ಕೇಳಿದ್ರೇ ಸುಮ್ಮನಿರಲ್ಲ: ಶಾಸಕ ಶಿವಗಂಗಾ ಬಸವರಾಜ್ ತಾಕೀತು

ವೆಂಕಟೇಶರಾವ್ ಅವರು ತಮ್ಮ ಸ್ವಂತದ 80 ಸಾವಿರ ಹಣವನ್ನು ಖರ್ಚು ಮಾಡಿ, ಸುಮಾರು 250 ಅಡಿ ಆಳದ ಕೊಳವೆಬಾವಿ ಕೊರೆಸಿದ್ದಾರೆ. ಬಯಲು ಹನುಮಾನ ದೇವಸ್ಥಾನದ ಬಳಿ ಕೊರೆದಿರುವ ಈ ಕೊಳವೆ ಬಾವಿಗೆ 3 ಇಂಚು ಸಿಹಿ ನೀರು ಸಿಕ್ಕಿದ್ದು, ಎಲ್ಲರಿಗೂ ಕುಡಿಯಲು ಯೋಗ್ಯವಾದ ಶುದ್ಧ ನೀರಿನ ಅನುಕೂಲವಾಗಿದೆ. ಜನಪ್ರತಿನಿಧಿಗಳು ಮಾಡಬೇಕಿದ್ದ ಕೆಲಸ ರೈತ ಮಾಡಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ರೈತ ಜಿ.ವೆಂಕಟೇಶ್ವರಾವ, ನಾವು ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಹನುಮಾನ ದೇವರ ಕೃಪಾಶೀರ್ವಾದ ಇದೆ. ಹಾಗಾಗಿ ನಾವು ಹನುಮಾನ್​ ದೇವರಿಗೆ ಅರ್ಪಿಸಿದ ಭಕ್ತಿಯ ಕಾಣಿಕೆ ಇದಾಗಿದ್ದು, ಜನರು ಈ ನೀರನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : 24 ಸಚಿವರ ಪದಗ್ರಹಣಕ್ಕೆ ನಾಳೆ ಮುಹೂರ್ತ ಫಿಕ್ಸ್: ರಾಜಭವನದಲ್ಲಿ ನಡೆಯಲಿದೆ ಪ್ರಮಾಣವಚನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.