ವಿಜಯಪುರ: ಸಿಂದಗಿ ತಾಲೂಕಿನ ಕುರತ್ತಹಳ್ಳದಲ್ಲಿ ಜುಲೈ 7ರಂದು ರಾತ್ರಿ ಕೊಚ್ಚಿ ಹೋಗಿದ್ದ ರೈತನ ಶವ ಇಂದು ಹಳ್ಳದ ಮುಳ್ಳುಗಂಟಿಯಲ್ಲಿ ದೊರೆತಿದೆ.
ಮೃತ ವ್ಯಕ್ತಿಯನ್ನು ಕುರತ್ತಹಳ್ಳಿ ನಿವಾಸಿ ಬಸವಂತರಾಯ ಅಂಬಾಗೋಳ (55) ಎಂದು ಗುರುತಿಸಲಾಗಿದೆ. ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸುತ್ತಿದ್ದ ತಾಲೂಕಾಡಳಿತ ಸಿಬ್ಬಂದಿಗೆ ಶವ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾಡದೋಣಿ ಬಳಸಿ ಹುಡುಕಾಟ ನಡೆಸಿ ಕೊನೆಗೂ ಯಶಸ್ವಿಯಾಗಿದೆ.
ತಹಶೀಲ್ದಾರ್ ಸಂಜೀವ ಮಾದರ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದರು. ಇಂದು ಹಳ್ಳದ ಪಕ್ಕದಲ್ಲಿನ ಮುಳ್ಳುಗಂಟಿಯಲ್ಲಿ ಕೊಳೆತ ರೀತಿ ಶವ ಪತ್ತೆಯಾಗಿದೆ.
ಓದಿ: ಪೊಲೀಸರ ದಾಳಿಯಲ್ಲಿ ಸೈಲೆಂಟ್ ಸುನಿಲ್, ಒಂಟೆ ರೋಹಿತ್, ಸೈಕಲ್ ರವಿ ಸೇರಿ 50ಕ್ಕೂ ಹೆಚ್ಚು ರೌಡಿಗಳು ಮಿಸ್ಸಿಂಗ್!