ವಿಜಯಪುರ: ಹಳೇ ದ್ವೇಷದ ಹಿನ್ನೆಲೆಯಲ್ಲಿ 2 ಕುಟುಂಬಗಳ ಮಧ್ಯೆ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಬಿಜಾಪುರ ಹಾಗೂ ಪಕಾಲಿ ಕುಟುಂಬದ ಮಧ್ಯೆ ಜಗಳ ನಡೆದಿದ್ದು, ಉಭಯ ಕುಟುಂಬಗಳ ಸದಸ್ಯರು ಮಾರಕಾಸ್ತ್ರಗಳನ್ನು ಹಿಡಿದು ಬೀದಿಯಲ್ಲಿ ಜಗಳವಾಡಿದ್ದಾರೆ.
ಮಾರಾಮಾರಿಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ.
ಮಾರಾಮಾರಿ ಬಳಿಕ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಪೊಲೀಸರು ಹಾಗೂ ಡಿಎಆರ್ ತುಕಡಿ ಬೀಡು ಬಿಟ್ಟಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಗಂಡನ ಎದುರೇ ಕಾಮುಕರ ಅಟ್ಟಹಾಸ.. ಜೀವನ್ಮರಣದ ಮಧ್ಯೆ ಸಂತ್ರಸ್ತೆ ನರಳಾಟ