ETV Bharat / state

ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಹೇಳಿದ ಇಂಗ್ಲೆಂಡ್ ಪ್ರವಾಸಿ - vidyaspoorthi public school

ಇಂಗ್ಲೆಂಡ್​ನ ಪ್ರವಾಸಿಗರೊಬ್ಬರು ಕನ್ನಡದಲ್ಲೇ ರಾಜ್ಯೋತ್ಸವಕ್ಕೆ ಶುಭಾಶಯವನ್ನು ಕೋರಿದ್ದಾರೆ.

ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆ
ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆ
author img

By

Published : Nov 2, 2022, 9:44 PM IST

ಮುದ್ದೇಬಿಹಾಳ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕನ್ನಡ ಭಾಷೆಯಲ್ಲಿ ನಾವು ಕನ್ನಡಿಗರೇ 'ವಿಶ್ ಯೂ ಹ್ಯಾಪಿ ಕರ್ನಾಟಕ ರಾಜ್ಯೋತ್ಸವ' ಎಂದು ಶುಭಾಶಯ ಹೇಳುವ ಹೊತ್ತಲ್ಲಿ ಇಂಗ್ಲೆಂಡ್​ನಿಂದ ಭಾರತದ ಪ್ರವಾಸದಲ್ಲಿರುವ ಆ ದೇಶದ ಪ್ರಜೆಯೊಬ್ಬರು ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ಹೇಳುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.

ಇಂಗ್ಲೆಂಡ್​ ಪ್ರವಾಸಿ ಪ್ರಾನ್ಸಿಸ್​
ಇಂಗ್ಲೆಂಡ್​ ಪ್ರವಾಸಿ ಪ್ರಾನ್ಸಿಸ್​

ಮುದ್ದೇಬಿಹಾಳದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರ ಪುತ್ರ ಭರತಗೌಡ ಪಾಟೀಲ್ ಅವರು ಇಂಗ್ಲೆಂಡ್‌ನ ಆಕ್ಸ್​ಫರ್ಡ್ ಯೂನಿವರ್ಸಿಟಿಯಲ್ಲಿ ಓದುವ ಸಮಯದಲ್ಲಿ ಅವರಿಗೆ ಜೊತೆಯಾಗಿದ್ದ ಇಂಗ್ಲೆಂಡ್ ಪ್ರಜೆ ಫ್ರಾನ್ಸಿಸ್ ಮಂಗಳವಾರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿಗೆ ಕರೆ ತಂದಿದ್ದರು.

ತಾಲೂಕಿನ ಢವಳಗಿ ಹಾಗೂ ಮುದ್ದೇಬಿಹಾಳ ಪಟ್ಟಣದಲ್ಲಿರುವ ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆಯ ಮಕ್ಕಳಿಗೆ ಶಾಸಕರು ಕೊಡ ಮಾಡಿರುವ ಉಚಿತ ನೋಟ್​ಬುಕ್‌ಗಳನ್ನು ವಿತರಿಸುವ ಕಾರ್ಯಕ್ರಮದ ಜೊತೆಗೆ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 'ನಮಸ್ತೆ ಎಲ್ಲರಿಗೂ, ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು’ ಎಂದು ಕನ್ನಡದಲ್ಲಿಯೇ ಮಕ್ಕಳಿಗೆ, ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಅಭಿಮಾನ ಪ್ರದರ್ಶನ: ಬಳಿಕ ಆಂಗ್ಲ ಭಾಷೆಯಲ್ಲಿ ಮಾತನಾಡಿದ ಫ್ರಾನ್ಸಿಸ್, ಭಾರತದ ನಾಲ್ಕು ದಿಕ್ಕುಗಳಲ್ಲೂ ಪ್ರವಾಸ ಮಾಡಿಕೊಂಡು ಬಂದಿದ್ದೇನೆ. ಒಂದೊಂದು ದಿಕ್ಕಿನಲ್ಲೂ ಒಂದೊಂದು ರೀತಿಯ ವಾತಾವರಣ, ವೇಷಭೂಷಣ ಬದಲಿದೆ. ಆದರೆ, ಭಾರತೀಯರ ಹೃದಯ ಮಾತ್ರ ವಿಶಾಲವಾಗಿದೆ ಎಂದು ಹೇಳುವ ಮೂಲಕ ಅಭಿಮಾನ ಪ್ರದರ್ಶಿಸಿದರು.

ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆ
ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆ

ಕನ್ನಡದಲ್ಲೇ ಶುಭ ಹಾರೈಕೆ: ವಿದ್ಯಾಸ್ಪೂರ್ತಿ ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಸಿದ್ದರೆಡ್ಡಿ ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಇಂಗ್ಲೆಂಡ್ ದೇಶದ ವ್ಯಕ್ತಿ ಭಾರತಕ್ಕೆ ಆಗಮಿಸಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡದಲ್ಲೇ ಶುಭ ಹಾರೈಸಿರುವುದು ಖುಷಿ ಹೆಚ್ಚಾಗಿದೆ ಎಂದು ಹೇಳಿದರು.

ಇದೇ ವೇಳೆ, ವಿದ್ಯಾಸ್ಪೂರ್ತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಶಾಲೆಯ ಸಂಸ್ಥಾಪಕರಾದ ರಾಮನಗೌಡ ಸಿದರೆಡ್ಡಿ, ಕಾರ್ಯದರ್ಶಿ ಮಹಾಂತೇಶ ಸಿದರೆಡ್ಡಿ, ರವಿ ಪತ್ತಾರ, ಶ್ರೀಕಾಂತ ಗೊಳಸಂಗಿ, ಮುಖ್ಯ ಗುರುಮಾತೆ ನೀಲಮ್ಮ ಢವಳಗಿ, ಅಶ್ವಿನಿ ಬಿರಾದಾರ, ಪುರಸಭೆ ನಾಮನಿರ್ದೇಶಿತ ಸದಸ್ಯ ಸುನೀಲ್ ಹಡಲಗೇರಿ ಮೊದಲಾದವರು ಪಾಲ್ಗೊಂಡಿದ್ದರು.

ಓದಿ: ಕನ್ನಡ ರಾಜ್ಯೋತ್ಸವದ ಶುಭಾಶಯಗಳು: ಇಲ್ಲಿದೆ ನೀವು ತಿಳಿದಿರಬೇಕಾದ ಆಚರಣೆಯ ಇತಿಹಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.