ETV Bharat / state

ವಿಜಯಪುರ: ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ನೆಲಮಟ್ಟದಲ್ಲಿ ತಂತಿ ಅಳವಡಿಕೆಗೆ ಸಿದ್ಧತೆ

ವಿಜಯಪುರ ನಗರ ಪ್ರದೇಶದಲ್ಲಿ 3.50 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಹೆಸ್ಕಾಂಗೆ ಸವಾಲಾಗಿ ಪರಿಣಮಿಸಿದೆ.

Electrical wire installation at ground level in vijayapur  district
ಟ್ರಾನ್ಸ್​ಫಾರ್ಮರ್​
author img

By

Published : Nov 6, 2020, 9:10 PM IST

ವಿಜಯಪುರ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲು ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ) ಹೆಣಗಾಡುತ್ತಿದ್ದು, ಮಳೆಗಾಲದಲ್ಲಿ ಗ್ರಾಹಕರಿಂದ ಅಧಿಕಾರಿಗಳಿಗೆ ನಿತ್ಯ ಮಂಗಳಾರತಿ ನಡೆಯುತ್ತಿದೆ.

ಈ ಸಮಸ್ಯೆ ನಿವಾರಣೆಗೆ ಹೆಸ್ಕಾಂ ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದು, ಮೊದಲ ಹಂತವಾಗಿ ನಗರ ಪ್ರದೇಶದಲ್ಲಿ ಸರಳ ಹಾಗೂ ಸುರಕ್ಷಿತ ವಿದ್ಯುತ್ ವ್ಯವಸ್ಥೆಗೆ ನೆಲಮಟ್ಟದಲ್ಲಿ (ಅಂಡರ್​ಗ್ರೌಂಡ್) ವಿದ್ಯುತ್​​​ ತಂತಿ ಅಳವಡಿಸಲು ಮುಂದಾಗಿದೆ. ಇದರ ಸಾಧಕ-ಬಾದಕ ಏನು? ಗ್ರಾಹಕ ಸ್ನೇಹಿ ಆಗಲು ಕೈಗೊಳ್ಳುತ್ತಿರುವ ಕ್ರಮಗಳೇನು? ಎಂಬುದರ ಕುರಿತು ವರದಿ ಇಲ್ಲಿದೆ.

ಸದ್ಯ ನಗರ ಪ್ರದೇಶದಲ್ಲಿ 3.50 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಹೆಸ್ಕಾಂಗೆ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಮಳೆಗಾಲದಲ್ಲಿ ಕಂಬಗಳು ಬಿದ್ದು, ವಿದ್ಯುತ್ ಅವಘಡ ಸಂಭಿವಿಸಿ ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸುತ್ತಲೇ ಇರುತ್ತದೆ.

ಅದನ್ನು ಗಮನದಲ್ಲಿಟ್ಟುಕೊಂಡು ಹೆಸ್ಕಾಂ 11 ಕೆವಿ ಸಾಮರ್ಥ್ಯದ ವಿದ್ಯುತ್ ಸರಬರಾಜನ್ನು ನೆಲ ಮಟ್ಟದಲ್ಲಿ ನೀಡಬೇಕು ಎನ್ನುವ ಯೋಜನೆಗೆ ಕೈ ಹಾಕಿದೆ. ಮೊದಲ ಹಂತದಲ್ಲಿ ನಗರ ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಲಿದೆ. ಹೊಸ ಬಡಾವಣೆ ನಿರ್ಮಾಣದ ವೇಳೆ ಈ ಪ್ರಯೋಗಕ್ಕೆ ಮುಂದಾಗಿದೆ. ಸದ್ಯ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.

ತೊಡಕುಗಳು: ಮಹಾನಗರ ಪಾಲಿಕೆ ಎಲ್ಲೆಂದರಲ್ಲಿ ಗುಂಡಿ ತೋಡುವ ಕಾರ್ಯ ನಡೆಸುವುದರಿಂದ ಹೆಸ್ಕಾಂಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಿರಂತರವಾಗಿ ವಿದ್ಯುತ್ ನೀಡುವುದು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶದಲ್ಲಿಯೇ ಸಾವಿರಾರು ಟಿಸಿಗಳು ವಿದ್ಯುತ್ ಸರಬರಾಜಿನಲ್ಲಿ ನಿತ್ಯ ತೊಂದರೆ ಅನುಭವಿಸಬೇಕಾಗಿದೆ. ಅಂತಹ ಟಿಸಿ ಮತ್ತು ಅವುಗಳ ಬದಲಾವಣೆಯ ಬೇಡಿಕೆ ಹೆಚ್ಚಾಗಿದೆ. ಆದರೆ ಅವುಗಳನ್ನು ಬದಲಿಸಲು ಹುಬ್ಬಳ್ಳಿ ಮುಖ್ಯ ಕಚೇರಿಯ ಅನುಮತಿ ದೊರೆಯುವುದು ಕಷ್ಟವಾಗಿದೆ.

ಗ್ರಾಹಕರು ಹೆಸ್ಕಾಂ ಕಚೇರಿಯ 1912 ಸಹಾಯವಾಣಿಗೆ ದೂರು ಸಲ್ಲಿಸಿದರೂ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.‌ ಮಳೆಗಾಲದಲ್ಲಿ ವಿದ್ಯುತ್ ಅವಘಡ ಸಂಭವಿಸಿದರೆ ಅದನ್ನು ನಿವಾರಿಸಲು ವಾರವೇ ಕಾಯಬೇಕಾಗಿದೆ. ಇದರಿಂದ ರೈತರು, ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ವಿದ್ಯುತ್​ ಸಮಸ್ಯೆ ಕುರಿತು ಎಂಜಿನಿಯರ್​ ಮತ್ತು ಗ್ರಾಹಕರ ಅಭಿಪ್ರಾಯ

ಜಿಲ್ಲೆಯಲ್ಲಿ ವಿದ್ಯುತ್ ಕಳ್ಳತನ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ನಗರ ಪ್ರದೇಶದಲ್ಲಿ ಹೊಸ ಮನೆ, ಕಟ್ಟಡ ನಿರ್ಮಾಣಕ್ಕೆ ಇನ್ನಿತರ ಉಪಯೋಗಕ್ಕೆ ನೇರವಾಗಿ ಕಂಬದಿಂದ ತಂತಿ ಮೂಲಕ ವಿದ್ಯುತ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ತೋಟದ ಮನೆ, ಪಂಪ್​​ಸೆಟ್​​​ಗಳಿಗೆ ಕಂಬಗಳಿಂದ ವಿದ್ಯುತ್ ಕಳ್ಳತನ ಮಾಡಲಾಗುತ್ತಿದೆ.

ಪ್ರತಿ ತಾಲೂಕಿಗೆ ವಿಚಕ್ಷಣ ದಳ ಇದ್ದರೂ ವಿದ್ಯುತ್ ಕಳ್ಳತನ ತಡೆಗೆ ಕಡಿವಾಣ ಬಿದ್ದಿಲ್ಲ. ಈಗ ಹೆಸ್ಕಾಂ ಖಾಸಗಿ ವಲಯಕ್ಕೆ ವಹಿಸಬೇಕು ಎನ್ನುವ ಚಿಂತನೆ ರಾಜ್ಯ ಸರ್ಕಾರ ನಡೆಸುತ್ತಿದೆ. ಅದಕ್ಕಾಗಿ ಹೆಸ್ಕಾಂ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಯ ಹೆಸ್ಕಾ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಹೆಸ್ಕಾಂ ಖಾಸಗಿ ತೆಕ್ಕೆಗೆ ಜಾರಿದರೆ ಮುಂದಿನ ಸಾಧಕ-ಭಾದಕಗಳು ಜನರಿಗೆ ಅನುಕೂಲವೋ ಅಥವಾ ಅನಾನೂಕುಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.