ವಿಜಯಪುರ: ನಗರದ ಹಲವೆಡೆ ಇಕ್ಕಟಿನ ಬಡಾವಣೆ ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿದ್ದು, ಇವನ್ನು ತೆರವುಗೊಳಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿದ್ಯುತ್ ಸಂಪರ್ಕ ಇಲ್ಲದೇ ಯಾವ ಕೆಲಸ ಕಾರ್ಯಗಳು ನಡೆಯುವದಿಲ್ಲ. ಹಾಗೆಯೇ ಒಂದು ಮನೆಯಿಂದ ಮತ್ತೊಂದು ಮನೆಗೆ ಸಂಪರ್ಕ ಕಲ್ಪಿಸಲು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ ಅಳವಡಿಸಬೇಕಾಗುತ್ತದೆ. ಇದರ ಏರುಪೇರು ಆಗದಂತೆ ಗೃಹ ಬಳಕೆಗೆ ಬಳಸುವಷ್ಟು, 11 ಕೆವಿಯಷ್ಟು ವಿದ್ಯುತ್ ಹಿಡಿದಿಡುವಷ್ಟು ಸಾಮರ್ಥ್ಯ ಹೊಂದಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ ಅಳವಡಿಸುತ್ತಾರೆ.
ಕೆಲವು ಬಡಾವಣೆಗಳು ಚಿಕ್ಕದಾಗಿರುತ್ತವೆ. ಅದೇ ಜಾಗದಲ್ಲಿ ಕಂಬ ಅಳವಡಿಸಲಾಗುತ್ತದೆ. ಇದು ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಇದನ್ನು ಗಮನಿಸಿ ಕಂಬವನ್ನು ಬಯಲು ಜಾಗದಲ್ಲಿ ಅಳವಡಿಸಿ ಎನ್ನುವುದು ಬಡಾವಣೆ ನಿವಾಸಿಗಳ ಬೇಡಿಕೆಯಾಗಿದೆ. ಇನ್ನು ಬಯಲು ಜಾಗ ಸಹ ಯಾರದ್ದೋ ಇರುತ್ತದೆ. ನಾನೇಕೆ ಕಂಬ ಅಳವಡಿಸಲು ಅವಕಾಶ ನೀಡಲಿ ಎನ್ನುವ ಜಟಾಪಟಿಗಳು ಸಹ ನಡೆದಿದ್ದುಂಟು.
ಇದನ್ನೂ ಓದಿ: ಬೀದಿಬದಿಯ ವ್ಯಾಪಾರಕ್ಕೆ ಬೀಗ ಬಿದ್ದರೆ ಗತಿಯೇನು?: ಆತಂಕದಲ್ಲಿ ವ್ಯಾಪಾರಸ್ಥರು!
ವಿಜಯಪುರ ನಗರದಲ್ಲಿಯೇ 1,000ಕ್ಕಿಂತ ಅಧಿಕ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಗಳು ಇವೆ. ನಗರ ಬೆಳೆದಂತೆ ವಿದ್ಯುತ್ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಇದರ ಜತೆ ವಿವಿಧ ಕಾಮಗಾರಿಗಳಿಗೆ ಅಡ್ಡಿಯಾಗುವ ಕಂಬಗಳನ್ನು ತೆರವುಗೊಳಿಸುವ ಅನಿರ್ವಾಯತೆ ಇದೆ. ಹೊಸದಾಗಿ ಗೃಹ ಬಳಕೆಗೆ, ವಾಣಿಜ್ಯ ಬಳಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಇನ್ನು ಸ್ವಯಂ ಅರ್ಪಾಟ್‌ಮೆಂಟ್ ನಿರ್ಮಿಸುವವರು ಕಂಬ ಅಳವಡಿಕೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಿದ್ಧಪಡಿಸಿಕೊಂಡರೆ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ರೆಡಿ ಇದೆ. ಸದ್ಯ ಬೇಸಿಗೆ ಇರುವ ಕಾರಣ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಗಳ ಮೇಲೆ ಇಲಾಖೆ ನಿಗಾ ವಹಿಸಬೇಕಾಗಿದೆ.