ETV Bharat / state

ಸಹೋದರಿಯರ ಸವಾಲ್​: ಅಕ್ಕನಿಗೆ ಸೋಲುಣಿಸಿದ ತಂಗಿ! - Gram Panchayat Election Result

ತಂಗಿಯೊಬ್ಬಳು ಅಕ್ಕಳನ್ನು ಸೋಲಿಸುವ ಮೂಲಕ ಅಚ್ಚರಿಯ ಜಯದ ನೆಗೆ ಬೀರಿದ್ದಾರೆ. ಇಬ್ಬರೂ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚೌವ್ಹಾಣ್​ ಅಕ್ಕಂದಿರು ಅನ್ನೋದು ಇಲ್ಲಿ ಮತ್ತೊಂದು ಗಮನಾರ್ಹ ಸಂಗತಿ.

elder sister who beat the older sister
ಅಕ್ಕಳನ್ನು ಸೋಲಿಸಿದ ತಂಗಿ
author img

By

Published : Dec 30, 2020, 10:27 PM IST

ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ಜೆಡಿಎಸ್‌ ಶಾಸಕರ ಸಹೋದರಿಯರ ಗ್ರಾಮ ಪಂಚಾಯಿತಿ ಚುನಾವಣಾ ಸ್ಪರ್ಧೆಯಲ್ಲಿ ತಂಗಿಯು ಅಕ್ಕಳನ್ನು ಸೋಲಿಸುವ ಮೂಲಕ ಜಯದ ನೆಗೆ ಬೀರಿದ್ದಾರೆ.

ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿಗೆ ಜೆಡಿಎಸ್ ಶಾಸಕ ದೇವಾನಂದ ಚೌವ್ಹಾಣ್​ ಸಹೋದರಿಯಾದ ಅಕ್ಕ ನೀಲಾ ಬಾಯಿ ಅಂಗಡಿ, ತಂಗಿ ಕಸ್ತೂರಿ ಬಾಯಿ ದೊಡಮನಿ ಸ್ಪರ್ಧೆ ಮಾಡಿದ್ದರು.

ತಂಗಿ ಕಸ್ತೂರಿ ಬಾಯಿ ದೊಡಮನಿ 342 ಮತಗಳನ್ನು ಪಡೆದುಕೊಂಡರೆ, ಅಕ್ಕ ನೀಲಾ ಬಾಯಿ ಅಂಗಡಿ 246 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ತಂಗಿ 96 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಇಬ್ಬರೂ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚೌವ್ಹಾಣ್​ ಅಕ್ಕಂದಿರು ಅನ್ನೋದು ಇಲ್ಲಿ ಗಮನಾರ್ಹ ಸಂಗತಿ. ನೀಲಾ ಬಾಯಿ ಅಂಗಡಿ ಮೂರು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆ, 2 ಬಾರಿ ಅಧ್ಯಕ್ಷೆಯಾಗಿದ್ದರು. ಕಸ್ತೂರಿ ಬಾಯಿ ದೊಡಮನಿ ಒಂದು ಬಾರಿ ಸಿಂದಗಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿದ್ದರು. ಈ ಬಾರಿ ತಂಗಿಗೆ ಮತದಾರರು ಜೈ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.