ETV Bharat / state

ಎರಡು ಪ್ರತ್ಯೇಕ ಪ್ರಕರಣ.. ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಎಂಟು ಮಂದಿ ಬಂಧನ - IPL betting case

ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಐವರನ್ನು ವಿಜಯಪುರ ನಗರದ ಗೋಲ ಗುಂಬಜ್ ಠಾಣಾ ಪೊಲೀಸರು ಬಸವನ ಬಾಗೇವಾಡಿಯಲ್ಲಿ 3 ಕಡೆ ಹಾಗೂ ನಿಡಗುಂದಿ ಪಟ್ಟಣದಲ್ಲಿ 1 ಕಡೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ₹61,500 ನಗದು ಸೇರಿ 4 ಮೊಬೈಲ್ ವಶಕ್ಕೆ ಪಡೆದಿದ್ದಾರೆ..

Arrest
Arrest
author img

By

Published : Oct 4, 2020, 4:19 PM IST

ವಿಜಯಪುರ : ಸಿಇಎನ್ ಇನ್ಸ್‌ಪೆಕ್ಟರ್ ಸುರೇಶ ಬೆಂಡೆಗುಂಬಳ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.

ಖಾದರ ಇನಾಮದಾರ್, ಶಾಬಾಜ್ ಇನಾಮದಾರ್, ಅಲ್ತಾಫ್ ಇನಾಮದಾರ್ ಬಂಧಿತರು. ಇವರಿಂದ ₹5,000 ನಗದು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ವಸೀಂ ಇನಾಮದಾರ್ ಪರಾರಿಯಾಗಿದ್ದಾನೆ.

ಐವರ ಬಂಧನ : ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಐವರನ್ನು ವಿಜಯಪುರ ನಗರದ ಗೋಲ ಗುಂಬಜ್ ಠಾಣಾ ಪೊಲೀಸರು ಬಸವನ ಬಾಗೇವಾಡಿಯಲ್ಲಿ 3 ಕಡೆ ಹಾಗೂ ನಿಡಗುಂದಿ ಪಟ್ಟಣದಲ್ಲಿ 1 ಕಡೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ₹61,500 ನಗದು ಸೇರಿ 4 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ನಿಡಗುಂದಿ ಪಟ್ಟಣದ ವಿಜಯ ಹಣಮಂತಪ್ಪ ಚಿತ್ರದುರ್ಗ, ಮಂಜುನಾಥ ಸಂಗಪ್ಪ ಚೌಧರಿ, ಬಸವನಬಾಗೇವಾಡಿ ಪಟ್ಟಣದ ಸೋಮನಾಥ ರಾಮಚಂದ್ರ ಜಾಧವ, ಅಶೋಕ ಬಸವರಾಜ ಗಾಣಿಗೇರ ಹಾಗೂ ಸಂತೋಷ ಶಿವಪ್ಪ ಚಿಂಚೋಳಿ ಎಂದು ಗುರುತಿಸಲಾಗಿದೆ ಎಂದು ಎಸ್‌ಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.