ವಿಜಯಪುರ: ನಗರ ಸೇರಿದಂತೆ ವಿವಿಧೆಡೆ ಶುಕ್ರವಾರ ರಾತ್ರಿ 10.46ರ ಸುಮಾರಿಗೆ ಲಘು ಭೂಕಂಪನವಾದ ಅನುಭವವಾಗಿದೆ. ನಗರದ ರೈಲ್ವೆ ಸ್ಟೇಷನ್, ಗೋಳಗುಮ್ಮಟ, ಕೀರ್ತಿ ನಗರ ಸೇರಿದಂತೆ ವಿವಿಧೆಡೆ ಹಾಗೂ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
ರಾತ್ರಿ ಭೂಕಂಪನದಿಂದ ಮತ್ತೆ ಮನಗೂಳಿ ಜನರು ಭಯಭೀತರಾಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಮನಗೂಳಿಯಲ್ಲಿ ಭೂಕಂಪನ ಆಗಿತ್ತು. ಕಳೆದ ಜನವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಭೂಮಿ ಕಂಪಿಸಿತ್ತು. ಈ ವೇಳೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಸೇರಿದಂತೆ ಹಲವು ವಿಜ್ಞಾನಿಗಳು ಭೇಟಿ ನೀಡಿದ್ದರು. ಇದೀಗ ಮೂರು ತಿಂಗಳ ಬಳಿಕ ಮತ್ತೆ ಲಘು ಭೂಕಂಪನವಾಗಿದೆ.
(ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಮರ ಬಿದ್ದು ರೈತ ಸಾವು!)