ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಬಳಿ ಇಂದು ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೂಕಂಪನದ ತೀವ್ರತೆ ಬಹಳ ಕಡಿಮೆ ಇದೆ. ಭೂಕಂಪನ ಕೇಂದ್ರಬಿಂದುವಿನಿಂದ 5-7 ಕಿ.ಮೀ ಅಂತರದವರೆಗೆ ಭೂಮಿ ಕಂಪಿಸಿದ ಅನುಭವ ಆಗಿರಬಹುದು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ರಾಜನ್ ತಿಳಿಸಿದ್ದಾರೆ.
ಯಾವುದೇ ಹಾನಿಯಾಗಿಲ್ಲ:
ಭೂಕಂಪನದಿಂದ ಯಾವುದೇ ಜೀವ ಹಾನಿ ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ. ಈ ರೀತಿಯ ಭೂಕಂಪಗಳು ಯಾವುದೇ ಹಾನಿ ಉಂಟುಮಾಡುವುದಿಲ್ಲ. ಸ್ಥಳೀಯವಾಗಿ "ಸ್ವಲ್ಪ ಕಂಪಿಸುವಿಕೆ" ಕಂಡುಬಂದಿದೆ ಎಂದು ರಾಜನ್ ಹೇಳಿದರು. ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ತೀವ್ರತೆಯು ತುಂಬಾ ಕಡಿಮೆ ಇದೆ, ಇದು ಅಪಾಯಕಾರಿಯಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರದಲ್ಲಿ ಕಂಪಿಸಿದ ಭೂಮಿ: ಅನುಭವ ಬಿಚ್ಚಿಟ್ಟ ಸ್ಥಳೀಯರು
ಅಕ್ಟೋಬರ್ 1 ರಂದು ಜಿಲ್ಲೆಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿತ್ತು.