ETV Bharat / state

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪದ ಅನುಭವ.. ಭಯಭೀತರಾದ ಜನ - Earthquake experience in Vijayapura

ವಿಜಯಪುರ ನಗರ ಸೇರಿದಂತೆ, ಬಸವನಬಾಗೇವಾಡಿ, ತಾಳಿಕೋಟೆ, ಮುದ್ದೇಬಿಹಾಳ, ಆಲಮಟ್ಟಿ, ಕೊಲ್ಹಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬಾಗಲಕೋಟೆ ನಗರ, ಮುಧೋಳ, ಬೀಳಗಿ, ಲೋಕಾಪುರ ಹಾಗೂ ಕೂಡಲಸಂಗಮದಲ್ಲಿ ಭೂಕಂಪನವಾಗಿದೆ.

Vijayapura Golgumbaj
ವಿಜಯಪುರ ಗೋಲ್​ಗುಂಬಜ್​
author img

By

Published : Aug 26, 2022, 6:46 AM IST

ವಿಜಯಪುರ: ಜಿಲ್ಲೆಯಲ್ಲಿ‌ ಪದೇ ಪದೆ ಲಘು ಭೂಕಂಪನ ಅನುಭವದಿಂದ ಜನತೆಯಲ್ಲಿ ಭಯದ ವಾತಾವರಣ ಮೂಡಿದೆ. ಕಳೆದ ರಾತ್ರಿ 9.51 ಹಾಗೂ ಇಂದು ಮಧ್ಯರಾತ್ರಿ 2.21ರ ಸುಮಾರಿಗೆ ಜನತೆಗೆ ಭೂಕಂಪನದ ಅನುಭವ ಆಗಿದೆ.

ವಿಜಯಪುರ ನಗರ ಸೇರಿದಂತೆ, ಬಸವನಬಾಗೇವಾಡಿ, ತಾಳಿಕೋಟೆ, ಮುದ್ದೇಬಿಹಾಳ, ಆಲಮಟ್ಟಿ, ಕೊಲ್ಹಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬಾಗಲಕೋಟೆ ನಗರ, ಮುಧೋಳ, ಬೀಳಗಿ, ಲೋಕಾಪುರ ಹಾಗೂ ಕೂಡಲಸಂಗಮದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.9ರಷ್ಟು ಆಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನ್ನಮ್ಮನವರ ಮಾಹಿತಿ ನೀಡಿದ್ದಾರೆ.

ಕಳೆದ 15 ದಿನಗಳಿಂದ ಪದೇ ಪದೇ ಲಘು ಭೂಕಂಪನದ ಅನುಭವ ಆಗುತ್ತಿದೆ. ಆಲಮಟ್ಟಿಯಲ್ಲಿರುವ ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ನಿನ್ನೆ ರಾತ್ರಿ ಹಾಗೂ ಇಂದು ಮಧ್ಯರಾತ್ರಿ ಜನತೆ ಅನುಭವಿಸಿದ ಕಂಪನದ ಬಗ್ಗೆ ನಿರ್ದಿಷ್ಟ ದಾಖಲೆ ಬಿಡುಗಡೆ ಮಾಡಬೇಕಾಗಿದೆ.

ಇದನ್ನೂ ಓದಿ : ವಿಜಯಪುರದಲ್ಲಿ ಮತ್ತೆ ಭೂಕಂಪನ: ಸೋಮವಾರ ಒಂದೇ ದಿನ 3 ಬಾರಿ ಗಡ ಗಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.