ಮುದ್ದೇಬಿಹಾಳ : ಕಳೆದ ವಾರದಿಂದಷ್ಟೇ ವಿಜಯಪುರ ಜಿಲ್ಲೆಯಾದ್ಯಂತ ಭೂಕಂಪನದ ಸುದ್ದಿ ಸುದ್ದು ಮಾಡಿದ ಬೆನ್ನಲ್ಲೇ ತಾಲೂಕಿನಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿರುವ ಘಟನೆ ನಡೆದಿದೆ.
ತಾಲೂಕಿನ ಢವಳಗಿ ಗ್ರಾಮದಲ್ಲಿ ಮಧ್ಯಾಹ್ನ 12.47ರ ಸುಮಾರಿಗೆ 2-3 ಸೆಕೆಂಡಗಳ ಕಾಲ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರಿಗೆ ಆಗಿದೆ. ಕೆಲವರ ಮನೆಯಲ್ಲಿ ಪಾತ್ರೆಗಳು ಕೆಳಕ್ಕೆ ಬಿದ್ದಿರುವ ಘಟನೆಯೂ ಬೆಳಕಿಗೆ ಬಂದಿದೆ.
ಭೂಮಿ ಎರಡ್ಮೂರು ಸೆಕೆಂಡಗಳ ಕಾಲ ನಡುಗಿತು. ಕೂಡಲೇ ನಾವೆಲ್ಲ ಮನೆಯಿಂದ ಹೊರ ಬಂದೆವು. ಸಾಕಷ್ಟು ಜನರಿಗೆ ಭೂಕಂಪನದ ಅನುಭವ ಆಗಿದೆ ಎಂದು ಗ್ರಾಮಸ್ಥ ವಿನೋದ್ ಕೊಣ್ಣೂರ ಎಂ ಕೆ ಗುಡಿಮನಿ ಹೇಳಿದರು.