ವಿಜಯಪುರ: ಜಿಲ್ಲೆಯಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ತಿಕೋಟಾ ತಾಲೂಕಿನ ಬಾಬಾನಗರ ಹಾಗು ಹಲವಾರು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ.
ಬೆಳಿಗ್ಗೆ 10:30 ಸುಮಾರಿಗೆ ಭೂಕಂಪನದ ಅನುಭವವಾಗಿದ್ದು, ಭಯಭೀತರಾದ ಜನತೆ ಮನೆಯಿಂದ ಹೊರಗಡೆ ಓಡಿ ಬಂದರು. ನಡುಗಿದ ಭೂಮಿಯಿಂದ ಭಾರೀ ಸದ್ದು ಬರುತ್ತಿದೆ. ಅಲ್ಲದೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕಂಪನ ಅನುಭವ ಆಗುತ್ತಿರುವ ಕಾರಣ ಜನರು ಆತಂಕದಲ್ಲಿ ವಾಸ ಮಾಡುವಂತಾಗಿದೆ.
ಇಂದು ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ನ್ಯಾಶನಲ್ ಜಿಯೋಫಿಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ.
ಇದನ್ನೂ ಓದಿ: ಮತ್ತೆ ವಿಜಯಪುರದಲ್ಲಿ ನಡುಗಿದ ಭೂಮಿ.. ಹೆದರಿ ಮನೆಯಿಂದ ಹೊರಗೆ ಓಡಿ ಬಂದ ಜನ..