ವಿಜಯಪುರ: ತಾನು ಸಾಕಿದ್ದ ಶ್ವಾನದ ಹುಟ್ಟುಹಬ್ಬಕ್ಕೆ ಜುನಾಗಢ ಮಹಾರಾಜ ಕೋಟ್ಯಂತರ ರೂ. ಖರ್ಚು ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ನೆನಪಿಸುವಂಥ ಪ್ರಕರಣವೊಂದು ವಿಜಯಪುರದಲ್ಲಿ ನಡೆದಿದೆ.
ನಿಡಗುಂದಿಯಲ್ಲಿ ವ್ಯಕ್ತಿಯೊಬ್ಬರು ತಾವು ಸಾಕಿದ್ದ ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ನಿಡಗುಂದಿಯ ಶರಣು ಪತ್ರಿ ಎಂಬ ಶ್ವಾನಪ್ರಿಯರು ತಮ್ಮ ಮುದ್ದಿನ ನಾಯಿ ಟೈಗರ್ನ ಎರಡನೇ ವರ್ಷದ ಬರ್ತ್ ಡೇ ಆಚರಿಸಿದ್ದು, ಉಡುಗೊರೆಯಾಗಿ ಐದು ತೊಲೆ (50ಗ್ರಾಂ) ಚಿನ್ನದ ಸರ ಗಿಫ್ಟ್ ಹಾಕಿದ್ದಾರೆ.
ಬಿಎಂಟಿಸಿ ನೌಕರರಾಗಿರುವ ಶರಣು ಪತ್ರಿ ಹಾಗೂ ಮಾವ ಸಂಗಯ್ಯ, ಊರಿನವರಿಗೆಲ್ಲಾ ಊಟ ಹಾಕಿಸಿ ತಮ್ಮ ಶ್ವಾನದ ಹುಟ್ಟುಹಬ್ಬ ಆಚರಿಸಿದ್ದಾರೆ. ಟೈಗರ್(ನಾಯಿ) ಹುಟ್ಟುಹಬ್ಬದ ಅಂಗವಾಗಿ 500 ಜನಕ್ಕೆ ಊಟ ಹಾಕಿಸಿದ್ದಾರೆ. ಡಿಸೆಂಬರ್ 28ರಂದು ಈ ಶ್ವಾನದ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.