ETV Bharat / state

ಡಂಗ್ಯೂ ಲಕ್ಷಣ ಹೊಂದಿರುವ ಜಿಕಾ ವೈರಸ್.. ರೋಗ ಹರಡದಂತೆ ತಡೆಯಲು ಸಜ್ಜಾದ ಜಿಲ್ಲಾ ಆರೋಗ್ಯ ಇಲಾಖೆ - ETv Bharat Karnataka

ಉಲ್ಭಣಿಸಿರುವ ಕೋವಿಡ್ ವೈರಸ್ ಪ್ರಭಾವ- ವಿಜಯಪುರ ಜಿಲ್ಲೆಯ ಜನರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಎಚ್ಚರಿಕೆಯಿಂದ ಆತಂಕ-

Vijayapura District Hospital
ವಿಜಯಪುರ ಜಿಲ್ಲಾ ಆಸ್ಪತ್ರೆ
author img

By

Published : Dec 22, 2022, 10:25 PM IST

ಆರೋಗ್ಯ ಇಲಾಖೆ ರೋಗ ಲಕ್ಷಣ ಹರಡುವ ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಿದೆ.

ವಿಜಯಪುರ : ಚೀನಾದಲ್ಲಿ ಉಲ್ಭಣಿಸಿರುವ ಕೋವಿಡ್ 19 ವೈರಸ್ ಕರ್ನಾಟಕಕ್ಕೂ ನಾಲ್ಕನೇ ಅಲೆ ರೂಪದಲ್ಲಿ ಹರಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಎಚ್ಚರಿಕೆಯಿಂದ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿಯೂ ಕೋವಿಡ್ ಗುಮ್ಮ ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರ ಜತೆ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ರೋಗ ಹೆಚ್ಚಾಗುತ್ತಿರುವ ಕಾರಣ ಜಿಲ್ಲೆ ಸದ್ಯ ರೋಗಗ್ರಸ್ತವಾಗುತ್ತಿದೆ. ಸರ್ಕಾರದ ಸೂಚನೆಯಂತೆ ಜಿಲ್ಲಾ ಆರೋಗ್ಯ ಇಲಾಖೆ ಸಹ ಎಚ್ಚೆತ್ತುಕೊಂಡು ಮುಂಜಾಗ್ರತ ಕ್ರಮಕ್ಕೆ ಮುಂದಾಗಿದೆ.

ಕಳೆದ ಜನವರಿ ರಿಂದ ನವೆಂಬರ್ ವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಒಟ್ಟು 2863 ಜನರನ್ನು ಕೋವಿಡ್ ಪರೀಕ್ಷೆ ಒಳಪಡಿಸಿದೆ. ಅದರಲ್ಲಿ 435 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಅದರಂತೆ ಚಿಕೂನ್ ಗುನ್ಯಾ ಸಂಬಂಧ 2479 ಜನರ ರಕ್ತ ಪರೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲಿ 406 ಜನರು ಚಿಕೂನ್ ಗುನ್ಯಾ ಲಕ್ಷಣಗಳು ದೃಢಪಟ್ಟಿವೆ. ಸದ್ಯ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಜಿಕಾ ವೈರಸ್ ತಡೆಗೂ ಸಿದ್ಧತೆ : ಮತ್ತೊದೆಡೆ ಕೋವಿಡ್​ ನಂತರ ಜಿಕಾ ವೈರಸ್ ರಾಯಚೂರಿನಲ್ಲಿ ಮೊದಲು ಪತ್ತೆಯಾದ ಮೇಲೆ ಈ ರೋಗ ತಡೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಚಿಕೂನ್ ಗುನ್ಯಾ ಹಾಗೂ ಡೆಂಗ್ಯೂ ಲಕ್ಷಣಗಳು ಗ್ರಾಮೀಣ ಭಾಗಕ್ಕಿಂತ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಕಾಣುತ್ತಿರುವ ಕಾರಣ ಆರೋಗ್ಯ ಇಲಾಖೆ ಜಿಕಾ ವೈರಸ್​ ರೋಗ ಲಕ್ಷಣ ಹರಡುವ ಈಡಿಸ್ ಈಜಿಪ್ಟೆ ಸೊಳ್ಳೆ ನಿಯಂತ್ರಣಕ್ಕೆ ಮುಂದಾಗಿದೆ ಎಂದು ಡಾ. ಸುರೇಶ ಚವ್ಹಾಣ್​ ಹೇಳಿದರು. ಜಿಕಾ ವೈರಸ್ ಸಹ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾಗೆ ಬರುವ ಲಕ್ಷಣಗಳನ್ನು ಹೊಂದಿರುವ ಕಾರಣ ಆರೋಗ್ಯ ಇಲಾಖೆ ರಕ್ತಪರೀಕ್ಷೆ ನಡೆಸುವಾಗ ಜಿಕಾ ವೈರಸ್ ಪತ್ತೆ ಪರೀಕ್ಷೆಯನ್ನು ನಡೆಸುತ್ತಿದೆ ಎಂದು ತಿಳಿಸಿದರು.

ಕೋವಿಡ್​ನ ಮೂರು ಅಲೆಯಲ್ಲಿ ಸೋಂಕು ಹರಡದಂತೆ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿತ್ತು. ಈಗ ಮತ್ತೊಮ್ಮೆ ರೋಗ ಹರಡಬಹುದು ಎನ್ನುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮತ್ತೆ ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯಗೊಳಿಸುವ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಈಗಲೇ ಮತ್ತೊಮ್ಮೆ ಜನ ಕೋವಿಡ್ ನಿಂದ ಬಚಾವ ಆಗಲು ಮಾನಸಿಕವಾಗಿ ಸಿದ್ಧವಾದಂತಿದೆ. ಆರೋಗ್ಯ ಇಲಾಖೆಗಳು ಸಹ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ‌‌ಕ್ರಮ ಕೈಗೊಳ್ಳುತ್ತಿದೆ. ಇದರ ಜತೆ ತಾಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ ಆರೋಗ್ಯ ಉಪ ಕೇಂದ್ರದಲ್ಲಿಯೂ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ : ಝಿಕಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.